ಸೊರಬದಲ್ಲಿ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಜು ಮೇಲಿನ ಹಲ್ಲೆ ಖಂಡಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಅನವಟ್ಟಿ ಪ್ರಥಮ ದರ್ಜೆ ಕಾಲೇಜಿನ ಬೋಧಕ ಸಿಬ್ಬಂದಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಿದರು. ಡಾ. ಜಿ.ಅರ್ ಜೋಶಿ, ಶಂಕರ್ ನಾಯ್ಕ, ಯಶೋದಾ, ಎಸ್, ದಿವ್ಯಾ ಕುಮಾರ್, ಮಂಜುನಾಥ್, ಕಾವ್ಯಾ, ಅಸ್ಮಾ, ಕೋಟ್ರೇಶ್ ಇತರರಿದ್ದರು. 
ನ್ಯೂಸ್

ಪ್ರಾಧ್ಯಾಪಕನ ಮೇಲೆ ಹಲ್ಲೆ ಖಂಡಿಸಿ ಮನವಿ

ಸೊರಬ: ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಜು ಅವರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ ಮತ್ತು ಅನವಟ್ಟಿ ಪ್ರಥಮ ದರ್ಜೆ ಕಾಲೇಜಿನ ಬೋಧಕ ಸಿಬ್ಬಂದಿ ಕೈಯಿಗೆ ಕಪ್ಪುಬಟ್ಟೆ ಕಟ್ಟಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಿದರು.

ಕಾಲೇಜಿನಲ್ಲಿ ಕರ್ತವ್ಯನಿರತ ಪ್ರಾಧ್ಯಾಪಕರ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿ ಮತ್ತು ಆತನ ತಂದೆ ಇಬ್ಬರು ಸೇರಿ ಹಾಜರಾತಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕರನ್ನು ಅವಾಚ್ಯವಾಗಿ ನಿಂದಿಸಿ ದೈಹಿಕವಾಗಿ ಹಲ್ಲೆ ಎಸಗಿದ್ದಾರೆ. ಇದೊಂದು ಅಮಾನವೀಯ ಮತ್ತು ದುಂಡಾವರ್ತನೆಯ ಕೃತ್ಯವಾಗಿದ್ದು, ಕರ್ತವ್ಯದ ಸ್ಥಳದಲ್ಲಿ ಸರ್ಕಾರಿ ನೌಕರರಿಗೆ ಕಿರುಕುಳ, ಬೆದರಿಕೆಯೊಡ್ಡಿದ ಘಟನೆಯಾಗಿದೆ. ಈ ಕೃತ್ಯವನ್ನು ಪ್ರಾಧ್ಯಾಪಕ ವೃಂದ ಮತ್ತು ವಿದ್ಯಾರ್ಥಿ ಸಮೂಹ ಖಂಡಿಸುತ್ತದೆ. ಹಲ್ಲೆ ನೆಡೆಸಿರುವ ವಿದ್ಯಾರ್ಥಿ ಮತ್ತು ಆತನ ತಂದೆಯನ್ನು ಕಾನೂನಿನ ವಶಕ್ಕೆ ಪಡೆದು ಕಠಿಣ ದಂಡನೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಪ್ರಾಚಾರ್ಯ ಗಣಪತಿ, ಕಾಲೇಜುಗಳ ಬೋಧಕ ಸಿಬ್ಬಂದಿ ಡಾ. ಜಿ.ಅರ್ ಜೋಶಿ, ಶಂಕರ್ ನಾಯ್ಕ, ಯಶೋದಾ, ಎಸ್, ದಿವ್ಯಾ ಕುಮಾರ್, ಮಂಜುನಾಥ್, ಕಾವ್ಯಾ, ಅಸ್ಮಾ, ಕೋಟ್ರೇಶ್, ಭೀಮಪ್ಪ, ಚಂದ್ರಪ್ಪ, ಹಬೀಬ್ ಉಲ್ಲಾ, ಕುಮಾರ್ ನಾಯ್ಕ, ರಾಘವೇಂದ್ರ ನಾಯ್ಕ, ಮಾರುತಿ, ಕುಶಾಲ್ ಕುಮಾರ್,ಮಿಲನ ,ದೀಲಿಪ್, ಮಂಜುನಾಥ್,ಗುರುದತ್ತ, ರವಿಕುಮಾರ್, ಜಾಹೀರ್, ಮಮತಾ ನಾಯ್ಕ ಇತರರಿದ್ದರು.