ನ್ಯೂಸ್

ಪ್ರಾಧಿಕಾರ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಿಕ ಸೇವಾ ಸಮಾಜದಿಂದ ನೇಮಕಗೊಂಡ ಓರ್ವ ಸದಸ್ಯರ ಸೇವಾ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಹೊಸ ಸದಸ್ಯರ ನೇಮಕಕ್ಕಾಗಿ ಆಸಕ್ತ ಅಭ್ಯರ್ಥಿಗಳು, ಎನ್.ಜಿ.ಓ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದ ಪಧವೀದರರಾಗಿರಬೇಕು. ಯಾವುದೇ ರಾಜಕೀಯ ಪಕ್ಷ ಅಥವಾ ಸೈದ್ದಾಂತಿಕ ಗುಂಪುಗಳಲ್ಲಿ ಗುರುತಿಸಿಕೊಂಡಿರಬಾರದು. ಸಮಾಜ ವಿರೋಧಿ ಅಥವಾ ರಾಷ್ಟ್ರೀಯ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರಬಾರದು. ಯಾವುದೇ ಸಂಜ್ಞೆ ಅಥವಾ ಅಸಂಜ್ಞೆಯ ಅಪರಾಧ ಪ್ರಕಟಣಗಳಲ್ಲಿ ತೊಡಗಿರಬಾರದು. ಶಿಕ್ಷಣ, ಆರೋಗ್ಯ, ಹಿಂದುಳಿದ ವರ್ಗಗಳ ಉನ್ನತೀಕರಣದಲ್ಲಿ ಸೇವೆ ಸಲ್ಲಿಸಿರಬೇಕು. ನಾಗರಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರಾಗಿರಬೇಕು. ದೂರು ಪ್ರಾಧಿಕಾರದಲ್ಲಿ ಅಭ್ಯರ್ಥಿಯ ಸೇವಾ ಅವಧಿಯು 3 ವರ್ಷಗಳು ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.