ವಿಜಯವಾಣಿ ಸುದ್ದಿಜಾಲ ಕೋಲಾರ
ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಜೂನ್ ತಿಂಗಳಲ್ಲಿ ಕೋಲಾರ ಮತ್ತು ಕೆ.ಜಿ.ಎಫ್. ವ್ಯಾಪ್ತಿಯಲ್ಲಿ ನಡೆಸಿದ ವಾಹನ ತಪಾಸಣೆಯಲ್ಲಿ ೬೮೦ ಪ್ರಕರಣಗಳನ್ನು ದಾಖಲಿಸಿ ೬.೪೬ ಲಕ್ಷ ರೂ.ಗಳ ದಂಡದ ಜೊತೆಗೆ ೫.೩೮ ಲಕ್ಷ ರೂ.ಗಳ ತೆರಿಗೆಯನ್ನು ವಸೂಲಿ ಮಾಡಿರುವುದಾಗಿ ಪ್ರಾದೇಶಿಕ ಸಾರಿಗೆ ಆಯುಕ್ತ ಎಂ.ವೇಣುಗೋಪಾಲರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ಸ್ಟೇಟ್ ಕ್ಯಾರಿಯರ್, ಶಾಲಾ ವಾಹನಗಳು, ಎಲ್‌ಎಂವಿ, ಆಟೋ ರಿಕ್ಷಾ, ವೈಟ್ ಬೋರ್ಡ್ ವಾಹನಗಳನ್ನು ಯಲ್ಲೋ ಬೋರ್ಡ್ ರೀತಿ ಉಪಯೋಗಿಸಿದ್ದು, ಅತಿ ಹೆಚ್ಚಿನ ಬಾರ ಹಾಕಿದ ಗೂಡ್ಸ್ ವಾಹನಗಳು, ಟಾರ್ಪಲ್ ಇಲ್ಲದೆ ಮರಳು ಮತ್ತು ಜಲ್ಲಿ ಸಾಗಣೆ, ಫಿಟ್‌ನೆಸ್,ವಿಮೆ, ತೆರಿಗೆ ಇಲ್ಲದ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ.
ಕೃಷಿಗೆ ಅನುಮತಿ ಪಡೆದಿದ್ದ ಟ್ರಾಕ್ಟರ್ ಮತ್ತು ಟೈಲರ್‌ಗಳಲ್ಲಿ ಇತರೆ ವಸ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ನೋಂದಣಿ ಇಲ್ಲದೆ ಸಂಚಾರ ಮಾಡುತ್ತಿದ್ದ ವಾಹನಗಳನ್ನು ಸೀಜ್, ದಾಖಲೆಗಳಿಲ್ಲದೆ ಸಂಚಾರ ಮಾಡುತ್ತಿದ್ದ ಕೋಲಾರ ನಗರಸಭೆಯ ೫ ಟ್ರಾಕ್ಟರ್‌ಗಳನ್ನು ಸೀಜ್ ಮಾಡಿ ದಂಡ ವಿಧಿಸಲಾಗಿದೆ.
ಜುಲೈ ತಿಂಗಳಲ್ಲಿಯೂ ಸಹಾ ವಾಹನ ತಪಾಸಣೆಯನ್ನು ನಡೆಸುವ ಮೂಲಕ ದಂಡ ಹಾಕುವ ಪ್ರಕ್ರಿಯೆ ಮುಂದುವರೆಯುವುದರಿAದಾಗಿ ಸವಾರರು ತಮ್ಮ ವಾಹನಗಳಿಗೆ ಸರಿಯಾದ ದಾಖಲೆಗಳನ್ನು ವಾಹನಗಳಲ್ಲಿ ಇರಿಸಿಕೊಳ್ಳಬೇಕು. ಆಟೋಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವಾಗ ಹೆಚ್ಚು ಸಂಖ್ಯೆಯಲ್ಲಿರದAತೆ ಎಚ್ಚರಿಕೆ ವಹಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ವಾಹನ ತಪಾಸಣಾ ದಳದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಇನ್ಸ್ಪೆಕ್ಟರ್‌ಗಳಾದ ಅರುಣ, ಮುನಿಕೃಷ್ಣ, ಗೋಪಾಲಕೃಷ್ಣ ಮುಂತಾದವರು ತಪಾಸಣಾ ಕಾರ್ಯವನ್ನು ಮುಂದುವರೆಸಿದ್ದಾರೆ.
ಚಿತ್ರ ೦೨ ಕೆ.ಎಲ್.ಆರ್. ೦೪ : ಕೋಲಾರದ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಇನ್ಸ್ಪೆಕ್ಟರ್‌ಗಳಾದ ಅರುಣ ಮತ್ತು ಮುನಿಕೃಷ್ಣ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಯಿತು.