ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿದರು. ಅಣ್ಣಯ್ಯಶೆಟ್ಟಿ, ಸಿ.ಎಸ್.ಗಣೇಶ್, ಸಿ.ಎಸ್.ಕುಶಾಲ್, ಪ್ರೇಮಾ, ಗಗನ್, ಜಯಶ್ರೀ, ಬಿ.ಜೆ.ದೇವರಾಜು, ಪಟೇಲ್ ನಟೇಶ್ ಇದ್ದರು. 
ನ್ಯೂಸ್

ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಅನುಕೂಲ

ಬೆಟ್ಟದಪುರ: ರಾಜ್ಯದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳು ನಡೆದು ಜನರಿಗೆ ಮೂಲಸೌಕರ್ಯ ದೊರೆಯಬೇಕಾದರೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಹೇಳಿದರು.

ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜನಪರ, ರೈತರಪರ ಯೋಜನೆಗಳನ್ನು ಜಾರಿಗೆ ತರವು ಮೂಲಕ ಉತ್ತಮ ಆಡಳಿತ ನೀಡಿದೆ ಎಂದರು.

ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಸಿ.ಎಸ್ ಗಣೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಸಿ.ಎಸ್.ಕುಶಾಲ್, ಕಾರ್ಯದರ್ಶಿ ವಿದ್ಯಾಶಂಕರ್, ರೈತ ಘಟಕದ ಅಧ್ಯಕ್ಷ ಬಿ,ಜೆ ದೇವರಾಜು, ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಸಿ.ಎಸ್.ಗಣೇಶ್, ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಸಿ.ಕೆ.ವೆಂಕಟೇಶ್, ಸಿ.ಪಿ.ಸುರೇಶ್, ಎಚ್.ಎಸ್.ದೇವೆಗೌಡ, ಧರಣೇಶ್, ಸರಸ್ವತಿ ಅರುಣ್, ಸುನೀತಾ ಮಂಜು, ಜಯಶ್ರೀ ಸ್ವಾಮಿ, ಶಶಿಕಲಾ, ಶೋಭಾ, ಮೀನಾಕ್ಷಿ, ಬಸವರಾಜು, ಮುಖಂಡರಾದ ಗಗನ್, ಪಟೇಲ್ ನಟೇಶ್, ಶಿವಣ್ಣ, ಚೌಡೇಗೌಡ, ರವಿ, ಪುಟ್ಟಸ್ವಾಮಿಗೌಡ, ಸಂಜೀವೇಗೌಡ ಇತರರಿದ್ದರು.