ರಿಪ್ಪನ್‌ಪೇಟೆ ಸಮೀಪದ ಗೊಂಬೆಕೊಪ್ಪದ ಸಾರಾ ಕೇಂದ್ರದಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಪರಿಸರ ಬಹುಮುಖ ನೋಟ ಶಿಬಿರವನ್ನು ಕೃಷ್ಣಮೂರ್ತಿ ಬಿಳಿಗಲ್ಲೂರು ಉದ್ಘಾಟಿಸಿದರು. ಡಾ. ರತ್ನಾಕರ ಸಿ. ಕುನುಗೋಡು, ಧನುಷ್‌ಕುಮಾರ್, ಗುರುಪಾದಪ್ಪ ಗೌಡ ಇತರರಿದ್ದರು. 
ನ್ಯೂಸ್

ಪ್ರಾಕೃತಿಕ ಸಂಪತ್ತಿನ ರಕ್ಷಣೆಯಾಗಲಿ

ರಿಪ್ಪನ್‌ಪೇಟೆ: ಪಶ್ಚಿಮಘಟ್ಟಗಳು ನಮ್ಮ ಪ್ರಾಕೃತಿಕ ಸಂಪತ್ತು. ಅವುಗಳ ರಕ್ಷಣೆಯಿಂದ ಮಾತ್ರ ನೈಸರ್ಗಿಕ ಸಮತೋಲನ ಕಾಪಾಡಲು ಸಾಧ್ಯ ಎಂದು ಸಿಗಂದೂರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಬಿಳಿಗಲ್ಲೂರು ಹೇಳಿದರು.

ಗೊಂಬೆಕೊಪ್ಪದ ಸಾರಾ ಕೇಂದ್ರದಲ್ಲಿ ಶುಕ್ರವಾರ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ಪರಿಸರ ಬಹುಮುಖ ನೋಟ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪಶ್ಚಿಮಘಟ್ಟಗಳಿಗೆ ಧಕ್ಕೆ ಮಾಡಿದರೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುತ್ತೇವೆ. ಕಸ್ತೂರಿರಂಗನ್ ವರದಿ ಪ್ರಕಾರ ಮಲೆನಾಡಿನ ನೂರಾರು ಹಳ್ಳಿಗಳನ್ನು ಸ್ಥಳಾಂತರಿಸುವ ಪ್ರಸ್ತಾಪವಿದೆ. ಜನರಿಗೆ ಇಲ್ಲಿ ಬಿಟ್ಟು ಇನ್ನೆಲ್ಲಿ ಜೀವನ ಹುಡುಕುವುದು ಎಂಬ ಆತಂಕ ಎದುರಾಗಿದೆ. ನಮ್ಮ ಪೂರ್ವಜರ ಪರಂಪರೆಯಿಂದ ಬಂದ ಕೃಷಿ ಚಟುವಟಿಕೆಯಿಂದ ಪರಿಸರಕ್ಕೆ ನಷ್ಟವಿಲ್ಲ. ಆದರೆ ಆಧುನಿಕತೆ ಭರಾಟೆಯ ವ್ಯವಹಾರ, ಉದ್ದಿಮೆ ಪ್ರವೃತ್ತಿಯಿಂದ ಪರಿಸರ ಸೂಕ್ಷ್ಮಗಳನ್ನು ಗಮನಿಸುತ್ತಿಲ್ಲ ಎಂದರು.

ಸಾಗರದ ಎಂಡಿಎ್ ಶಿಕ್ಷಣ ಮಹಾವಿದ್ಯಾಲಯ, ಮುರುಘಾಮಠದ ಶಿಕ್ಷಣ ಮಹಾವಿದ್ಯಾಲಯ, ಉಳ್ಳೂರಿನ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಶಿಬಿರ ನಿರ್ದೇಶಕ ಡಾ. ರತ್ನಾಕರ ಸಿ. ಕುನುಗೋಡು, ಸಂಚಾಲಕ ಧನುಷ್‌ಕುಮಾರ್, ಸಾರಾ ಕೇಂದ್ರದ ಅಧ್ಯಕ್ಷ ಗುರುಪಾದಪ್ಪ ಗೌಡ ಇತರರಿದ್ದರು.