ನ್ಯೂಸ್

ಪ್ರಯಾಣಿಕರಿಗೆ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ

ಚಿತ್ರದುರ್ಗ:ಸರ್ಕಾರಿ ನೌಕರರೆಂದು ತಮ್ಮನ್ನೂ ಪರಿಗಣಿಸ ಬೇಕೆಂದು ಒತ್ತಾಯಿಸಿ ಮುಷ್ಕರಕ್ಕೆ ಇಳಿದಿರುವ ರಾಜ್ಯರಸ್ತೆ ಸಾರಿಗೆ ನೌಕರ ಂದಾಗಿ ಜಿಲ್ಲಾದ್ಯಂತ ಸಂಸ್ಥೆ ಬಸ್‌ಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಬೆಂಗಳೂರಲ್ಲಿ ಬಸ್ಸಿಂದ ಕೆಳಗಿಳಿದು ನೌಕರರು ಮುಷ್ಕರ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ನಗರದಲ್ಲೂ ಬೆಳಗ್ಗೆಯಿಂದ ಬಸ್ ಸಂಚಾರ ಸ್ಥಗಿತಗೊಳ್ಳಲಾರಂಭಿಸಿತು.
ಚಿತ್ರದುರ್ಗ ವಿಭಾಗೀಯ ಕಚೇರಿ ವ್ಯಾಪ್ತಿ ಚಿತ್ರದುರ್ಗ,ಹೊಸದುರ್ಗ,ಚಳ್ಳಕೆರೆ ಹಾಗೂ ಪಾವಗಡ ಡಿಪೋಗಳ ಸಹಿತ ನಾಲ್ಕು ನೂರಕ್ಕೂ ಹೆಚ್ಚು ನೌಕರರ ಪ್ರತಿಭಟನೆಗೆ ಬೆಂಬಲಿಸಿದ್ದಾರೆ. ಇದರಿಂದಾಗಿ ವಿಭಾಗೀಯ ವ್ಯಾಪ್ತಿಯ 200ಕ್ಕೂ ಹೆಚ್ಚು ಶೆಡ್ಯೂಲ್‌ಗಳಲ್ಲಿ ನೂರಾರು ಬಸ್ ಸಂಚಾರ ಸ್ಥಗಿತಗೊಂಡಿದೆ.

ಬಸ್ ಸರ್ವಿಸ್ ಸ್ಥಗಿತವಾಗಿದೆ ಎಂದು ಗೊತ್ತಿಲ್ಲದ ಪ್ರಯಾಣಿಕರು,ವಿದ್ಯಾರ್ಥಿಗಳು ನಿಲ್ದಾಣದಲ್ಲಿ ಪರ ದಾಡುತ್ತಿದ್ದ ದೃಶ್ಯ ಸಾಮಾನ್ಯ ವಾ ಗಿತ್ತು. ಹಲವು ಪ್ರಯಾಣಿಕರು ಕೆಎಸ್‌ಆರ್‌ಟಿಸಿ ನಿಲ್ದಾಣದಿಂದ ಅನಿವಾರ‌್ಯವಾಗಿ ಖಾಸಗಿ ಬಸ್ ನಿಲ್ದಾಣಗಳೆಡೆ ಹೆಜ್ಜೆ ಹಾಕಬೇಕಾಯಿತು. ಹಲವು ಬಸ್‌ಗಳು ಡಿಪೋ ಬಿಟ್ಟು ಹೊರ ಬಂದಿಲ್ಲ,ಇನ್ನು ಹಲವು ನಿಲ್ದಾಣದಲ್ಲೇ ಇವೆ. ನೌಕರರ ಮುಷ್ಕರಿಂದಾಗಿ ನಮ್ಮ ವಿಭಾಗೀಯ ವ್ಯಾಪ್ತಿಯಲ್ಲೂ ಬಸ್ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಡಿವಿಜನಲ್ ಕಂಟ್ರೋಲರ್ ವಿಜಯಕುಮಾರ್ ತಿಳಿಸಿದ್ದಾರೆ.