ತಿ.ನರಸೀಪುರ: ಚಿರತೆ ದಾಳಿಯಿಂದ ಮೃತಪಟ್ಟ ತಾಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದ ಮೇಘನಾ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಚಿರತೆ ಸೆರೆಹಿಡಿಯುವ ಭರವಸೆ ನೀಡಿದರು.
ಬಳಿಕ ವಡ್ಗಲ್ ರಂಗನಾಥಸ್ವಾಮಿ ಬೆಟ್ಟ, ಎಸ್.ಕೆಬ್ಬೇಹುಂಡಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಅರಣ್ಯ ಇಲಾಖೆಯ ಕಾರ್ಯಾ ಚರಣೆ ವೀಕ್ಷಿಸಿ ಕೆಲ ಸಲಹೆ-ಸೂಚನೆ ನೀಡಿದರು. ಅಲ್ಲದೆ, ಚಿರತೆ ಸೆರೆ ಹಿಡಿಯಲು ಇರಿಸಿರುವ ಬೋನು ಹಾಗೂ ಕ್ಯಾಮರಾಗಳನ್ನು ಪರಿಶೀಲಿಸಿದರು.
ಮೇಘನಾ ಮೇಲೆ ಚಿರತೆ ದಾಳಿ ಮಾಡಿದ ಜಾಗ ಹಾಗೂ ಚಿರತೆ ಓಡಾಟದ ಪ್ರದೇಶಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.ಅರಣ್ಯಾಧಿಕಾರಿಗಳಾದ ಡಾ.ಮಾಲತಿ ಪ್ರಿಯಾ, ಕಮಲಾ ಕರಿಕಾಳನ್, ವಲಯ ಅರಣ್ಯಾಧಿಕಾರಿ ಮಂಜುನಾಥ್ ಇತರರು ಇದ್ದರು.