ಅಂತಾರಾಷ್ಟ್ರೀಯ ಸ್ನೇಹ ದಿನದ ಅಂಗವಾಗಿ ಬಾಳೆಹೊನ್ನೂರು ಲಯನ್ಸ್ ಕ್ಲಬ್ ಸದಸ್ಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಎಚ್.ಜೆ.ವಿಕ್ರಮ್, ಸುಧಾಕರ್, ಮಂಜುನಾಥ್ ತುಪ್ಪೂರು, ಸುರೇಂದ್ರ, ಶ್ರೀನಿವಾಸ ಗೌಡ, ರವೀಂದ್ರ ಇದ್ದರು. 
ನ್ಯೂಸ್

ಪ್ರತಿಲಾಕ್ಷೆಯಿಲ್ಲದ ಸಂಬಂಧವೇ ಸ್ನೇಹ

ಬಾಳೆಹೊನ್ನೂರು: ಜೀವನದಲ್ಲಿ ಯಾವುದೇ ಪ್ರತಿಲಾಪೇಕ್ಷೆ ಇಲ್ಲದಿರುವ ಸಂಬಂಧವೇ ಸ್ನೇಹ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಹೇಳಿದರು.

ಅಂತಾರಾಷ್ಟ್ರೀಯ ಸ್ನೇಹ ದಿನದ ಅಂಗವಾಗಿ ಪಟ್ಟಣದ ಲಯನ್ಸ್ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ನೇಹವೆಂದರೆ ಅತ್ಯಂತ ಕಾಳಜಿ, ಪರಿಶುದ್ಧವಾದ ಪ್ರೀತಿ ಹೊಂದಿರುವುದಾಗಿದೆ. ಸಂಘ, ಸಂಸ್ಥೆಗಳ ಮೂಲಕ ಇಂತಹ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ. ಉತ್ತಮ ಸ್ನೇಹಿತನನ್ನು ಪಡೆದ ವ್ಯಕ್ತಿ ಜೀವನದಲ್ಲಿ ಶ್ರೇಷ್ಠನಾಗಲಿದ್ದಾನೆ ಎಂದರು.

ಲಯನ್ಸ್ ಪೂರ್ವಾಧ್ಯಕ್ಷ ಮಂಜುನಾಥ್ ತುಪ್ಪೂರು ಮಾತನಾಡಿ, ಸ್ನೇಹ ಎಲ್ಲ ಬಂಧಕ್ಕಿಂತ ಪವಿತ್ರವಾದುದು. ಸ್ನೇಹ ಕೇವಲ ಭಾವನೆಗಳಿಂದ ಬರದೆ ಅದು ಮನಸ್ಸಿನಿಂದ ಬಂದಿದ್ದು. ಈ ಸಂಬಂಧವು ಆಧುನಿಕ ಯುಗದಲ್ಲಿ ಮಾತ್ರವಲ್ಲದೆ ಪೌರಾಣಿಕ ಕಾಲದಿಂದಲೂ ಬಂದಿದೆ ಎಂದು ಹೇಳಿದರು.

ಸ್ನೇಹ ಸಂಬಂಧಗಳಲ್ಲಿ ಸ್ನೇಹಿತರೊಂದಿಗೆ ನಮ್ಮ ಸುಖ-ದುಃಖಗಳನ್ನು ಹಂಚಿಕೊಳ್ಳಲು ಸಾಧ್ಯವಿದೆ. ಎಷ್ಟೋ ವೈಯಕ್ತಿಕ ವಿಚಾರಗಳನ್ನು ನಾವು ಸ್ನೇಹಿತರಿಗೆ ಹೇಳಿ ಆ ವಿಚಾರಗಳಿಗೆ ತಕ್ಕ ಪ್ರತಿಲವನ್ನು ಸ್ನೇಹಿತರಿಂದ ಪಡೆಯಬಹುದಾಗಿದೆ ಎಂದರು.

ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಎಂ.ವಿ.ಶ್ರೀನಿವಾಸ ಗೌಡ, ವಲಯ ಅಧ್ಯಕ್ಷ ಎಂ.ಡಿ.ಶಿವರಾಮ್, ಕಾರ್ಯದರ್ಶಿ ಸುಧಾಕರ್, ಖಜಾಂಚಿ ಕೆ.ಸಿ.ರವೀಂದ್ರ, ಸದಸ್ಯರಾದ ಟಿ.ಎಂ.ಗುರುಮೂರ್ತಿ, ಎಂ.ನಾರಾಯಣ, ಎ.ಸಿ.ಕೃಷ್ಣಮೂರ್ತಿ, ನಾರಾಯಣ ಶೆಟ್ಟಿ, ಉಪೇಂದ್ರ, ದಯಾನಂದ್ ಮತ್ತಿತರರಿದ್ದರು.