ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿಯನ್ನು ಪಡೆದು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ದಿ ಇನ್ಸ್‌ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಹೇಳಿದರು.
ನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪದವಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಸಮಾಜ ನಿರ್ಮಾಣದಲ್ಲಿ ಪದವೀಧರರ ಪಾತ್ರ ಅತೀ ಮುಖ್ಯವಾದುದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಬೇಕು. ಈ ನಿಟ್ಟಿಲ್ಲಿ ಎಲ್ಲರೂ ಶ್ರಮ ವಹಿಸಿ ಪ್ರಯತ್ನ ಪಡಬೇಕು ಎಂದರು.
ಟ್ರಸ್ಟ್‌ನ ಕಾರ್ಯದರ್ಶಿ ಕುಬೇರ್ ಪಿ. ಗೌಡ ಮಾತನಾಡಿ, ಇಂದಿನ ಯುವ ಸಮೂಹ ಸ್ನಾತಕೋತ್ತರ ಪದವಿಗೆ ಮಾತ್ರ ಶಿಕ್ಷಣ ಕೊನೆಗಳಿಸಬಾರದು. ಸಂಶೋಧನೆಯನ್ನು ಮಾಡಿ ಈ ದೇಶದ ಅಭಿವೃದ್ಧಿಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಬೇಕು. ಜೊತೆಗೆ ನಿಮ್ಮ ತಂದೆ ತಾಯಿ ಹಾಗೂ ನಿಮ್ಮ ಊರಿಗೆ ಒಳ್ಳೆಯ ಕೀರ್ತಿಯನ್ನು ತರಬೇಕೆಂದು ತಿಳಿಸಿದರು.