ರಾಮನಗರ : ವಸತಿರಹಿತರು ಮನೆ ನಿರ್ಮಿಸಿಕೂಳ್ಳಲು ಪಿಎಂಎಜಿವೈ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ 20 ಮನೆಗಳಂತೆ 400 ಮನೆಗಳು ಮಂಜೂರಾಗಿವೆ ಎಂದು ತಾಪಂ ಅಧ್ಯಕ್ಷ ಎಸ್.ಪಿ.ಜಗದೀಶ್ ಹೇಳಿದರು.
ತಾಪಂ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮಂಗಳವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆಯೆ ಗ್ರಾಮಸಭೆಯಲ್ಲಿ ವಸತಿ ರಹಿತರ ಪಟ್ಟಿ ಸಿದ್ಧಪಡಿಸಿ ಅನುಮೋದನೆ ಸಹ ಆಗಿದ್ದು, ಅಂತಹ ಲಾನುಭವಿಗಳಿಗೆ ಮೊದಲ ಆದ್ಯತೆ ನೀಡುವ ಮೂಲಕ ಅರ್ಹರನ್ನು ಆಯ್ಕೆ ಮಾಡಿ ಎಂದರು.
ಚುನಾಯಿತ ಪ್ರತಿನಿಧಿಗಳು ಮನೆ ನಿರ್ಮಾಣ ಫಲಾನುಭವಿಗಳ ಆಯ್ಕೆಗೆ ಶಿಾರಸು ಮಾಡುತ್ತಾರೆ, ಅಂತಹ ಸಮಯದಲ್ಲಿ ಅರ್ಹತಾ ಪಟ್ಟಿಯಲ್ಲಿ ಅಂತಹವರ ಹೆಸರು ಇದ್ದರೆ ಮಾತ್ರ ಅವಕಾಶ ನೀಡಿ. ಮೂಲಸೌಕರ್ಯಗಳ ಜತೆಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ಹಣ ಮೀಸಲಿರಿಸಿ. ಚರಂಡಿ, ರಸ್ತೆ ನಿರ್ಮಾಣಕ್ಕೆ ನರೇಗಾ ಹಣವನ್ನು ಬಳಕೆ ಮಾಡಿ ಎಂದರು.
ಸರ್ಕಾರ ಶಿಕ್ಷಣಕ್ಕೆ ಎಲ್ಲ ಸವಲತ್ತು ನೀಡುತ್ತಿದ್ದರು ಸಹ ದಾಖಲಾತಿ ಪ್ರಮಾಣ ಕಡಿಮೆ ಏಕೆ ಎಂಬ ಬಗ್ಗೆ ಪಿಡಿಒಗಳು ಮಾಹಿತಿ ಸಂಗ್ರಹಿಸಿ ನೀಡುವಂತೆ ಸೂಚಿಸಿದರು.
ತಾಲೂಕು ಪಂಚಾಯಿತಿ ಇಇಒ ಶಿವಕುಮಾರ್ ಮಾತನಾಡಿ, 2015-16ರಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಿ, ಗ್ರಾಮ ಸಭೆಯಲ್ಲಿ ಅನುಮೋದನೆ ಸಹ ಆಗಿದೆ. ಆ ಪಟ್ಟಿಯಲ್ಲಿರುವ ಫಲಾನುಭವಿಗಳನ್ನು ಆಯ್ಕೆ ಮಾಡಲು ಪಂಚಾಯಿತಿ ಅಧಿಕಾರಿಗಳು ನಿಯಮಾವಳಿಯಂತೆ ಕ್ರಮವಹಿಸಿ, ಇ-ಸ್ವತ್ತು ಮಾಡಲಾಗದ ಆಸ್ತಿಗಳು, ಅರಣ್ಯ ಭೂಮಿ, ಗೋಮಾಳ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಬಂದಂತಹ ಅರ್ಜಿಗಳನ್ನು ಪರಿಗಣಿಸದೆ. ಗ್ರಾಮ ಪಂಚಾಯಿತಿಗಳು ಪಕ್ಷ ರಹಿತವಾಗಿದ್ದು ಅರ್ಹರಿಗೆ ಸರ್ಕಾರದ ಸವಲತ್ತು ಸಿಗುವಂತೆ ನೋಡಿಕೂಳ್ಳಿ ಎಂದರು.
ಕಾರ್ಯಾಗಾರದಲ್ಲಿ ಗ್ರಾಪಂ ಆಡಳಿತ ವ್ಯವಸ್ಥೆ, ಸ್ಥಾಯಿ ಸಮಿತಿ ಮತ್ತು ಉಪ ಸಮಿತಿಗಳ ರಚನೆ, ಕುಡಿಯುವ ನೀರಿನ ಬಳಕೆ, ಜಲಜೀವನ್ ಮಿಷನ ಕಾರ್ಯಕ್ರಮ, ಡಿಜಿಟಲ್ ಸಹಿ, ಗ್ರಂಥಾಲಯಗಳು, ಕಸ ವಿಲೇವಾರಿ ಘಟಕಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಸ ಸಂಗ್ರಹಿಸುವ ಆಟೋಗೆ ಚಾಲಕ ಇಲ್ಲ. ಇನ್ನು ಕಸ ವಿಲೇವಾರಿ ಮಾಡುವುದಾದರೂ ಹೇಗೆ ಎಂದು ಜಾಲಮಂಗಲ ಗ್ರಾಪಂ ಅಧ್ಯಕ್ಷ ರಾಜು ಪ್ರಶ್ನಿಸಿದರು.
ಕಾರ್ಯಾಗಾರದಲ್ಲಿ 20 ಗ್ರಾಪಂ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.