ಕೋಲಾರ: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕಲುಷಿತಗೊಂಡಿರುವ ರಾಜಕಾರಣವನ್ನು ಸ್ವಚ್ಛಗೊಳಿಸಲು ಮತ ಮಾರಾಟಕ್ಕೆ ಕಡಿವಾಣ ಹಾಕಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕು ಎಂದು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ತಾಲೂಕಿನ ಕೋರಗಂಡಹಳ್ಳಿಯ ಕಾಶಿ ವಿಶ್ವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 41 ಮಹಿಳಾ ಸಂಗಳಿಗೆ 2.05 ಕೋಟಿ ರೂ. ಸಾಲ ವಿತರಣೆಯಲ್ಲಿ ಮಾತನಾಡಿದರು. ಪ್ರಾಮಾಣಿಕ ಸಾಲ ಮರುಪಾವತಿ ಮಾಡಿ ಡಿಸಿಸಿ ಬ್ಯಾಂಕ್ನ್ನು ಸದೃಢವಾಗಿ ಕಟ್ಟಿದ ಮಾದರಿಯಲ್ಲೇ ಜಿಲ್ಲೆಯಲ್ಲಿ ಮತ ಮಾರಾಟಕ್ಕೆ ಕಡಿವಾಣ ಹಾಕಿ ನೈತಿಕ ಮೌಲ್ಯಗಳನ್ನು ಉಳಿಸಬೇಕಿದೆ ಎಂದರು.
ಡಿಸಿಸಿ ಬ್ಯಾಂಕನ್ನು ನಂಬಿಕೆ ತಳಹದಿಯ ಮೇಲೆ ನೀವು ಬೆಳೆಸುತ್ತಿದ್ದೀರಿ. ದಿವಾಳಿಯಾಗಿದ್ದ ಬ್ಯಾಂಕ್ ಅನ್ನು ರಾಜ್ಯಕ್ಕೆ ನಂ.1 ಎಂಬಂತೆ ಕಟ್ಟಿ ಬೆಳೆಸಿದ್ದೀರಿ. ಅದೇ ರೀತಿ ತಾಲೂಕು ಮತ್ತು ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಅಶುದ್ಧ ರಾಜಕಾರಣವನ್ನು ತೊಳೆಯುವ ಕೆಲಸ ನಿಮ್ಮಿಂದ ಸಾಧ್ಯ ಎಂದರು.
ರಾಜಕೀಯ ವ್ಯಾಪಾರ ಕೊನೆಗೊಳಿಸಿ: 5 ವರ್ಷಕ್ಕೊಮ್ಮೆ ಸಾವಿರ ರೂ. ಪಡೆದುಕೊಂಡು ವೋಟ್ ಮಾಡುವ ಸಂಸತಿಯಿಂದ ರಾಜಕಾರಣ ಹದಗೆಡುತ್ತಿದೆ. ರಾಜಕೀಯ ವ್ಯಾಪಾರವಾಗಿ ಮಾರ್ಪಾಡಾಗುವುದರಿಂದ ಇದನ್ನು ಎಲ್ಲ ತಾಯಂದಿರು ತಿರಸ್ಕರಿಸಿ ಅಭಿವೃದ್ಧಿಪರ ರಾಜಕಾರಣಿಗಳಿಗೆ ಅವಕಾಶ ನೀಡಬೇಕಿದೆ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಸ್ತ್ರೀಯರು ಆರ್ಥಿಕವಾಗಿ ಸದೃಢರಾಗಿ: ಮಹಿಳಾ ಸಂಗಳಿಂದ ಡಿಸಿಸಿ ಬ್ಯಾಂಕ್ ಉತ್ತಮವಾಗಿ ನಡೆಯುತ್ತಿದೆ. ಮಹಿಳೆಯರು ಸಹಕಾರಿ ಸಂಸ್ಥೆಯಲ್ಲಿ ಠೇವಣಿ ಇಡುವ ಮೂಲಕ ಬ್ಯಾಂಕ್ ಬೆಳವಣಿಗೆಗೆ ಸಹಕರಿಸಬೇಕು. ಚಿನ್ನಾಪುರದ ರೇಣುಕಾ ಯಲ್ಲಮ್ಮ ದೇವಾಲಯದ ಆವರಣದಲ್ಲಿ ಪ್ರತಿದಿನ ಮಹಿಳಾ ಸಂಗಳ ಸಭೆಗಳು ನಡೆಯುವ ಮೂಲಕ ಸಿ ಶಕ್ತಿ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ. ಇದೇ ಮಾದರಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳೆಯರು ಆರ್ಥಿಕ ಸದೃಢರಾಗಲು ಸಹಕಾರಿ ರಂಗದ ಲಾಭ ಪಡೆಯಲು ಮುಂದಾಗಬೇಕು ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಎನ್ಆರ್ಎಲ್ಎಂನಲ್ಲಿ ಮಹಿಳಾ ಸಂಗಳನ್ನು ನೋಂದಾಯಿಸಿ ಶೂನ್ಯ ಬಡ್ಡಿ ಸಾಲದ ಲಾಭ ಪಡೆಯಲು ಮುಂದಾಗಬೇಕಿದೆ. ತಪ್ಪಿದರೆ ಶೇ.5 ಬಡ್ಡಿ ಬೀಳುತ್ತದೆ ಎಂದು ಎಚ್ಚರಿಸಿದರಲ್ಲದೆ ತಾಲೂಕು ಪಂಚಾಯತಿಯ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚೆ ಮಾಡಿ ಒಕ್ಕೂಟದಿಂದ ವಾಪಸ್ ಬರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗೋವಿಂದಗೌಡರು ತಿಳಿಸಿದರು.
ಉದ್ಯೋಗ ಸೃಷ್ಟಿಗೆ ಯೋಜನೆ: ಆದಾಯೋತ್ಪನ್ನ ಚಟುವಟಿಕೆಗಳ ಮೂಲಕ ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಮಾಡಿ ಕ್ರಾಂತಿಕಾರಿ ಯೋಜನೆಗೆ ಡಿಸಿಸಿ ಬ್ಯಾಂಕ್ ಚಿಂತನೆ ನಡೆಸುತ್ತಿದೆ. ಪ್ರತಿಯೊಂದು ಮಹಿಳಾ ಸಂದಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಸಂಬಂಧ ಚರ್ಚೆಗಳು ನಡೆಯುತ್ತಿವೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಹೇಳಿದರು.
ಬಾಕ್ಸ್ )) ಭದ್ರತೆಯಿಲ್ಲದೆಯೇ 1,800 ಕೋಟಿ ರೂ. ಸಾಲ: ಮಹಿಳಾ ಸಂಗಳಿಗೆ ಯಾವುದೇ ಭದ್ರತೆ ಇಲ್ಲದೆ ಕೇವಲ ನಂಬಿಕೆಯಡಿ 1,800 ಕೋಟಿ ರೂ. ಸಾಲ ನೀಡುವ ಮೂಲಕ ಕೋಲಾರ ಡಿಸಿಸಿ ಬ್ಯಾಂಕ್ ಇಡೀ ದೇಶದಲ್ಲೇ ಐತಿಹಾಸಿಕ ಕ್ರಮಕೈಗೊಂಡಿದೆ. ಸಾಲ ಮರುಪಾವತಿ ಮತ್ತು ದಾಖಲೆಗಳ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ನೂರಾರು ಸಂಗಳಿಗೆ ಈಗಾಗಲೇ 10 ಲಕ್ಷ ರೂ. ಸಾಲ ನೀಡುವ ಮೂಲಕ ಮಹಿಳೆಯರನ್ನು ಪ್ರೋತ್ಸಾಹಿಸಲಾಗಿದೆ. ಸ್ತ್ರೀಯರು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಪ್ರತಿಯೊಂದು ಸಂವೂ ಗರಿಷ್ಠ ಮಟ್ಟದ ಸಾಲವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ಕಸಬಾ ಸೊಸೈಟಿ ಮೂಲಕ ಇದೀಗ 3.70 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. ಪ್ರಥಮ ಹಂತದಲ್ಲಿ 2.05 ಕೋಟಿ ರೂ. ವಿತರಿಸಲಾಗುತ್ತಿದೆ. ಉಳಿದವರಿಗೆ ಶ್ರೀದಲ್ಲೇ ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. | ನಾಗನಾಳ ಸೋಮಣ್ಣ ಡಿಸಿಸಿ ಬ್ಯಾಂಕ್ ನಿರ್ದೇಶಕ