ವಿಜಯವಾಣಿ ಸುದ್ದಿಜಾಲ ಕೋಲಾರ
ತಾಲೂಕಿನ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ.ಎನ್.ರವಿ ಅವರ ತೋಟಕ್ಕೆ ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಅಮೇರಿಕಾ ದೇಶದ ಕೃಷಿ ಅಧಿಕಾರಿಗಳು, ವಿಶ್ವ ಹಣಕಾಸು ಸಂಸ್ಥೆ, ಮತ್ತು ಎನ್.ಜಿ.ಓ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೃಷಿ ಇಲಾಖೆಯ ಉಪ ನಿರ್ದೇಶಕಿ ಸುಮಾ ನೇತೃತ್ವದಲ್ಲಿ ತೋಟಕ್ಕೆ ಭೇಟಿ ನೀಡಿದ್ದರು. ನೈಸರ್ಗ ಸಾವಯವ ಗೊಬ್ಬರ, ರಾಸಾಯನಿಕ ಮುಕ್ತ ಕೃಷಿ, ಟಮೋಟ, ಕ್ಯಾಪ್ಸಿಕಂ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳು, ವಿವಿಧ ತಳಿಯ ಹೂ ಗಿಡಗಳು ಬೆಳೆಯುವಿಕೆ ವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡರು.
ಭೂಮಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಸಾವಯುವ ಗೊಬ್ಬರದಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯಲು ಅನುಸರಿಸಬಹುದಾದ ಔಷಧೀಯ ಸಿಂಪಡಣೆ, ಕೃಷಿ ವಿಷಯಗಳ ಬಗ್ಗೆ ಟಿ.ಎನ್ ರವಿ ಅವರು ಮಾಹಿತಿ ನೀಡಿದರು. ರೈತ ರವಿ ರವರಿಂದ ಪ್ರಾಯೋಗಿಕ ಅನುಭವವನ್ನು ಪಡೆದುಕೊಂಡರು.
ಕೆವಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಾದ ನಾಗರಾಜ್, ಮಂಜುನಾಥ್, ಲಕ್ಷ್ಮೀದೇವಿ, ಸುಗಟೂರು ಶ್ರೀಧರ್, ರೈತ ಸಂಘದ ಬಯಲುಸೀಮೆ ಪ್ರದೇಶದ ಕಾರ್ಯದರ್ಶಿ ಪ್ರಭಾಕರ್ ಗೌಡ, ಉಪಾಧ್ಯಕ್ಷ ಬಿಸಲಹಳ್ಳಿ ಬೈಚೇಗೌಡ, ಸುಗಟೂರು ಗ್ರಾಪಂ ಅಧ್ಯಕ್ಷ ಭೂಪತಿಗೌಡ ಇದ್ದರು.
ಚಿತ್ರ ೨೩ ಕೆ.ಎಲ್.ಆರ್.೦೧ : ಪ್ರಗತಿಪರ ರೈತ ಕೆ.ಎನ್.ರವಿ ರವರ ತೋಟಕ್ಕೆ ಅಮೇರಿಕ ಕೃಷಿ ಅಧಿಕಾರಿಗಳು ಭೇಟಿ ನೀಡಿ ರೈತನಿಂದ ಮಾಹಿತಿ ಪಡೆದುಕೊಂಡರು.