ನ್ಯೂಸ್

ಪ್ಟೆಂಬರ್ 22 ರಿಂದ ಡಿಸೆಂಬರ್ 21 ರವರೆಗೆ ದಸರಾ ವಸ್ತು ಪ್ರದರ್ಶನ

 ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ 2025 ರ ದಸರಾ ವಸ್ತುಪ್ರದರ್ಶನವನ್ನು ಸೆಪ್ಟೆಂಬರ್ 22 ರಿಂದ ಡಿಸೆಂಬರ್ 21 ರವರೆಗೆ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.

 ಪ್ರತೀ ವರ್ಷದಂತೆ ವಸ್ತು ಪ್ರದರ್ಶನದ ಅವಧಿಯಲ್ಲಿ ಗಾನಕೋಗಿಲೆ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಹೆಸರಾಂತ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ. ಈ ಸಂಬoಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕಳೆದ ಹಿಂದಿನ ಎರಡು ವರ್ಷಗಳಲ್ಲಿ ಸಾಕಷ್ಟು / ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರುಗಳಿಂದ ಅರ್ಜಿಗಳು ಸ್ವೀಕೃತಗೊಂಡಿದ್ದು, ಸ್ವೀಕೃತಗೊಂಡಿರುವ ಅರ್ಜಿಗಳಿಗೆ ಕಾರ್ಯಕ್ರಮ ನೀಡಲು ಸಾಧ್ಯವಾಗಿರುವುದಿಲ್ಲ.

 ಆದುದರಿಂದ 2025 ರ ದಸರಾ ವಸ್ತುಪ್ರದರ್ಶನದ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಯಾವುದೇ ಅರ್ಜಿಯನ್ನು ಈ ಬಾರಿ ಸ್ವೀಕರಿಸುತ್ತಿಲ್ಲ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.