ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಗ್ರಾಮಾಂತರ ಮತ್ತು ಜಿಲ್ಲಾ ಸೈಬರ್ ಹಾಗು ಮಾದಕ ವಸ್ತುಗಳ ನಿಯಂತ್ರಣ ಪೋಲಿಸ್ ಜಂಟಿ ಕಾರ್ಯಾಚರಣೆಯಿಂದ ಅಕ್ರಮವಾಗಿ ವನ್ಯಜೀವಿಗಳ ಅಂಗಾAಗಗಳನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ ವನ್ಯಜೀವಿ ಅಂಗಾAಗಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಕಿಶೋರ್ ಕುಮಾರ್ ಆಗಿದ್ದು, ಕೋಲಾರ ತಾಲ್ಲೂಕಿನ ಬಂಗಾರಪೇಟೆ ರಸ್ತೆಯ ದಿಂಬ ಚಾಮನಹಳ್ಳಿ ಗೇಟ್ ಬಳಿ ವನ್ಯಜೀವಿ ಅಂಗಾAಗಗಳನ್ನು ಮಾರಾಟ ಮಾಡಲು ಇಟ್ಟುಕೊಂಡಿರುವ ಮಾಹಿತಿ ಮೇರೆಗೆ ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದಾಗ ಆರೋಪಿ ಬಳಿ ಜಿಂಕೆಯ ೨ ಕೊಂಬುಗಳು ಮತ್ತು ಚುಕ್ಕೆ ಜಿಂಕೆಯ ಒಂದು ಚರ್ಮವನ್ನು ವಶಪಡಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆಯ ತನಿಖೆ ಮುಂದುವರೆಸಿದಾಗ ಬಂಗಾರಪೇಟೆ ವಾಸದ ಮನೆಯಲ್ಲಿ ವನ್ಯ ಜೀವಿಗಳಿಗೆ ಸಂಬAಧಿಸಿದAತೆ ಇತರೆ ಅಂಗಾಗಳನ್ನು ಹೆಚ್ಚಿನ ಲಾಭಕ್ಕೆ ಮಾರಾಟ ಮಾಡಲು ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದ್ದು, ಆರೋಪಿಯನ್ನು ಮನೆಗೆ ಪೋಲಿಸರು ಕರೆದೊಯ್ದಾಗ ಚುಕ್ಕೆ ಜಿಂಕೆಯ ೦೩ ಚರ್ಮಗಳು, ೦೪ ಕಡಲು ಶಂಕುಗಳು, ಹುಲಿಯ ಚರ್ಮದಂತೆ ಬಣ್ಣ ಬಳಿದಿರುವ ಕಾಡುಬೆಕ್ಕಿನ ೦೧ ಚರ್ಮ, ೦೨ ನರಿಯ ಚರ್ಮಗಳು, ೦೨ ಚಿರತೆಯ ಹಲ್ಲುಗಳು, ೦೪ ಕಾಡು ಹಂದಿಯ ಹಲ್ಲುಗಳು ಸಿಕ್ಕಿದ್ದು, ಅವುಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಎಸ್.ಪಿ.ಬಿ.ನಿಖಿಲ್ ರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೋಲಿಸ್ ಠಾಣೆಯ ಪಿ.ಐ. ಕಾಂತರಾಜು ರವರ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ತೊಡಗಿ ಯಶಸ್ವಿಗೊಳಿಸಿದ್ದಕ್ಕೆ ಎಸ್.ಪಿ. ಅಭಿನಂದಿಸಿದ್ದಾರೆ.
ಚಿತ್ರ ೧೬ : ಕೆ.ಎಲ್.ಆರ್. ೦೩ : ಕೋಲಾರ ಗ್ರಾಮಾಂತರ ಪೋಲಿಸರು ಆರೋಪಿಯೊಬ್ಬನನ್ನು ಬಂಧಿಸಿ ಆತನಿಂದ ವನ್ಯ ಜೀವಿ ಅಂಗಾAಗಗಳನ್ನು ವಶಪಡಿಸಿಕೊಳ್ಳುತ್ತಿರುವುದು.