ನ್ಯೂಸ್

ಪೊಲೀಸ್ ವೆರಿಫಿಕೇಷನ್ ಪ್ರಮಾಣಪತ್ರವನ್ನೇ ಮಾರುತ್ತಿದ್ದ ಭೂಪರನ್ನು ಬಂಧಿಸಿದ ಹಾಸನದ ಬಡಾವಣೆ ಠಾಣೆ ಪೊಲೀಸರು

ಹಾಸನ: ನಕಲಿ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ನೀಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶೆಟ್ಟಿಹಳ್ಳಿಯ ಪರಮೇಶ್ವರ್, ಸಂಗಮೇಶ್ವರ ಬಡಾವಣೆ ನಿವಾಸಿ ಮಾದಪ್ಪ, ಶ್ರೀಕಾಂತ್, ಮಹಾಬಲೇಶ್ವರ ಬಂಧಿತರು.

ಖಾಸಗಿ ಕಂಪನಿಗಳಿಗೆ ಕೆಲಸಕ್ಕೆ ಸೇರುತ್ತಿದ್ದವರಿಗೆ ನಕಲಿ ವೆರಿಷಿಕೇಷನ್ ಪ್ರಮಾಣಪತ್ರ ನೀಡುತ್ತಿದ್ದರು.

ಒಂದು ಸರ್ಟಿಫಿಕೇಟ್ ಗೆ ಎರಡು ಸಾವಿರ ರೂ. ಪಡೆಯುತ್ತಿದ್ದರು.

ಕೃತ್ಯಕ್ಕೆ ಬಳಸಿದ್ದ ರಬ್ಬರ್ ಸ್ಟಾಂಪ್, ಲೆಟರ್ ಹೆಡ್, 65 ನಕಲಿ ಸೀಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಮಾಹಿತಿ ನೀಡಿದರು.