ಡಿಪಿಎನ್ ಶ್ರೇಷ್ಠಿ,ಚಿತ್ರದುರ್ಗ
ಕಾನೂನು-ಸುವ್ಯವಸ್ಥೆ ಪಾಲನೆಗೆ ಪೂರಕವಾಗಿ ಪೊಲೀಸರಿಗೆ ಡ್ರೋನ್ ಅಸ್ತ್ರ ಒದಗಿಸಲು ಇಲಾಖೆ ಮುಂದಾಗಿದೆ. 4 ಕೋಟಿ ರೂ.ವೆಚ್ಚ ದಲ್ಲಿ ಕನಿಷ್ಠ 150 ಡ್ರೋನ್‌ಗಳನ್ನು(ಯುಎವಿ)ಖರೀದಿಸಿ ಎಲ್ಲ ಜಿಲ್ಲಾ ಪೊಲೀಸ್ ಹಾಗೂ ಪೊಲೀಸ್ ಆಯುಕ್ತರ ಕಚೇರಿಗಳಿಗೆ ಪೂರೈಸಲು ಹಾಗೂ ಪೂರೈಕೆಯಲ್ಲಿ ನಗರ ಪ್ರದೇಶಗಳಿಗೆ ಆದ್ಯತೆ ನೀಡಲು ಇಲಾಖೆ ಪ್ಲಾನ್ ಮಾಡಿದೆ.
ಡ್ರೋನ್‌ಗೆ ಟೆಂಡರ್ ಕರೆದಿರುವ ಇಲಾಖೆ,ಅಂದಾಜು 3-4 ಕಿ.ಮೀ.ಸುತ್ತಳತೆ ಸಂಚಾರ ಸಾಮರ್ಥ್ಯದ ಡ್ರೋನ್‌ಗಳೊಂದಿಗೆ ಪ್ರತಿ ಜಿ ಲ್ಲೆಯಲ್ಲೂ ಕಾನೂನು ಸುವ್ಯವಸ್ಥೆ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದೆ. ಹಂತ,ಹಂತವಾಗಿ ಹಣಕಾಸು ಲಭ್ಯತೆ ಆಧರಿಸಿ ಪ್ರತಿ ಠಾಣೆ ಗೂ ಡ್ರೋನ್ ಒದಗಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಸಾವಿರಾರು,ಲಕ್ಷಾಂತರ ಜನರು ಸೇರುವ ಜಾತ್ರೆ,ಉತ್ಸವ,ಶೋಭಾಯಾತ್ರೆ,ವಿವಿಐಪಿ ಬಂದೋಬಸ್ತ್,ರ‌್ಯಾಲಿ,ಪ್ರತಿಭಟನೆ,ಮೆರವಣಿಗೆ ಇ ತ್ಯಾದಿ ಜನ ದಟ್ಟಣೆ ಚಿತ್ರೀಕರಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಹದ್ದಿನ ಕಣ್ಣಿಡಲು,ದೊಂಬಿ,ಗಲಾ ಟೆಯ ತಕ್ಷಣದ ಮಾಹಿತಿ ಸಂಗ್ರಹ,ವಿಶ್ಲೇಷಣೆಗೆ,ಅಪಘಾತದ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಕೂಡ ಡ್ರೋನ್ ಬಳಸಲಾಗುತ್ತಿದೆ.
ಇಲಾಖೆಗೆ ಡ್ರೋನ್ ಬಳಕೆ ಹೊಸದಲ್ಲ. ವಿಶೇಷ ಸಂದರ್ಭಗಳಲ್ಲಿ ಖಾಸಗಿ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಆದರೆ ಖಾಸಗಿ ಡ್ರೋ ನ್‌ಗಳಲ್ಲಿ ಸಂಗ್ರಹಿಸುವ ಮಾಹಿತಿ ಸುರಕ್ಷತೆ ಕುರಿತಂತೆ ಅನುಮಾನ ವ್ಯಕ್ತವಾಗಿರುವ ಹಾಗೂ ಖಾಸಗಿ ಡ್ರೋನ್‌ಗಳಲ್ಲಿ ಚೀನಾ ಉಪಕರಣ ಗಳ ಬಳಕೆ ಸಾಧ್ಯತೆ ಹಿನ್ನೆಲೆ ಸ್ವಂತದ್ದನ್ನು ಹೊಂದುವ ನಿರ್ಧಾರಕ್ಕೆ ಒತ್ತು ಸಿಕ್ಕಿದೆ. ಸ್ವಂತದ್ದಾದರೆ ಮಾಹಿತಿ ಸುರಕ್ಷತೆ ಮತ್ತು ವಿಶ್ಲೇಷಣೆಗೆ ಅನುಕೂಲವಾಗಲಿದೆ.
ಎರಡು ಸಾವಿರ ವಾಹನಗಳು
ಇಲಾಖೆಗೆ ಅಂದಾಜು 2 ಸಾವಿರ ವಿವಿಧ ಹೊಸ ವೆಹಿಕಲ್‌ಗಳ ಅಗತ್ಯ ಇವೆ. ರಾಜ್ಯಸರ್ಕಾರ ಹೊಸ ವಾಹನಗಳಿಗೆ ಎಂದು ಬಜೆಟ್‌ನಲ್ಲಿ 50 ಕೋಟಿ ರೂ.ಇರಿಸಿದೆ. ಜೀಪು,ಬೈಕ್,ಕಾರು,ವ್ಯಾನ್‌ಗಳ ಖರೀದಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಬಿಡುಗಡೆ ಮಾಡುವ ಅನುದಾನ ಆಧರಿಸಿ ಅಂದಾಜು 700 ವಾಹನಗಳನ್ನು,ಈ ಪೈಕಿ ವ್ಯಾನ್‌ಗಳನ್ನು ಹೆಚ್ಚಿನ ಸಂಖ್ಯೆಯ ಖರೀದಿಗೆ ಸಿದ್ಧತೆ ನಡೆದಿದೆ. ಹೈಟೆಕ್ ಹಾಗೂ ಬ್ಯಾಟ ರಿ ಚಾಲಿತ ವಾಹನಗಳ ಖರೀದಿ ಚಿಂತನೆ ಇದೆಯಾದರೂ, ಅದು ಅನುದಾನ ಆಧರಿಸಿದೆನ್ನಲಾಗಿದೆ.
ಬಾಡಿ ವೋರ್ನ್ ಕ್ಯಾಮೆರಾ
ಭ್ರಷ್ಟಾಚಾರ ನಿಯಂತ್ರಿಸುವ,ಸಮರ್ಥ ಸಾಕ್ಷಾೃಧಾರಗಳ ಸಂಗ್ರಹ ಹಾಗೂ ಪೊಲೀಸರ ವಿರುದ್ಧದ ಕಂಪ್ಲೆಂಟ್ ಕಡಿಮೆಗೊಳಿಸುವ ಉ ದ್ದೇಶದಿಂದ ಇಲಾಖೆ ಪೂರೈಸಿರುವ ಬಾಡಿ ವೋರ್ನ್ ಕ್ಯಾಮರಾಗಳನ್ನು ಅನೇಕ ಅಧಿಕಾರಿ,ಸಿಬ್ಬಂದಿ ಧರಿಸದೆ ಕೆಲಸ ಮಾಡುತ್ತಿದ್ದಾರೆ ಎಂಬ ಮಾತಿದೆ. ಈ ಹಿನ್ನೆಲೆಯಲ್ಲಿ ಎಷ್ಟರ ಮಟ್ಟಿಗೆ ಬಾಡಿ ವೋರ್ನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ ಎಂಬುದರ ಪರಿಶೀಲನೆಗೂ ಹಿರಿಯ ಅ ಧಿಕಾರಿಗಳು ಮುಂದಾಗಿದ್ದಾರೆ.
---
ಕೋಟ್
ಡ್ರೋನ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಸದ್ಯಕ್ಕೆ ಕನಿಷ್ಠ 150 ಡ್ರೋನ್ ಖರೀದಿಸಲು ಯೋಜಿಸಲಾಗಿದೆ. ಎಲ್ಲ ಜಿಲ್ಲೆಗಳಿಗೂ 2-3, ನಗರ ಪ್ರದೇಶಕ್ಕೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಡ್ರೋನ್‌ಗಳನ್ನು ಪೂರೈಸುವ ಉದ್ದೇಶವಿದೆ.
ಎಸ್.ಮುರುಗನ್,ಎಡಿಜಿಪಿ ಬೆಂಗಳೂರು.
---