ನ್ಯೂಸ್

ಪೊಲೀಸ್ ಗೆ ಇರಿತ ಮತ್ತೆ ಆರು ಮಂದಿಯ ಬಂಧನ ಗೋಲಿಬಾರ್ ಗೆ ಪ್ರತೀಕಾರ

ಮಂಗಳೂರು:ನಗರದ ನ್ಯೂಚಿತ್ರಾ ಟಾಕೀಸ್ ಬಳಿ ಡಿ.16 ರಂದು ಬಂದರು ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಗಣೇಶ್ ಕಾಮತ್ ಅವರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಮತ್ತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನೀಶ್ ಅಶ್ರಫ್, ಅಬ್ದುಲ್ ಖಾದರ್, ಶೇಖ್ ಮೊಹಮದ್ ಹಾರಿಸ್, ಮೊಹಮದ್ ಕಾಯಿಸ್,ರಾಹಿಲ್,ಮೊಹಮ್ಮದ್ ನವಾಜ್ ಬಂಧಿತರು. ಈಗಾಗಲೇ ಓರ್ವ ಅಪ್ರಾಪ್ತ ಮತ್ತು ನವಾಜ್ ಬಂಧಿಸಲ್ಪಟ್ಟಿದ್ದರು.

ಮಂಗಳೂರಿನಲ್ಲಿ ಕಳೆದ ವರ್ಷ ನಡೆದ ಗೋಲಿಬಾರ್ ಗೆ ಪ್ರತೀಕಾರವಾಗಿ ಘಟನೆ ನಡೆದಿದೆ. ನೈಟ್ರೋವಿಟ್ ಮಾತ್ರೆ ತೆಗೆದುಕೊಂಡು ಕೃತ್ಯ ನಡೆದಿದೆ. ಇದೊಂದು ಮಾಯಾ ಗ್ಯಾಂಗ್ ಎಂದು ಕರೆಸಿಕೊಂಡಿದೆ. ಇನ್ನೊಂದು ತಂಡದ ಸದಸ್ಯರು ಕೂಡಾ ಇದರಲ್ಲಿ ಭಾಗಿಯಾಗಿದ್ದಾರೆ.ಅವರನ್ನು ಕೂಡಾ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.