ನ್ಯೂಸ್

ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಗ್ರಾಮಸ್ಥರಿಂದ ಸನ್ಮಾನ

ಎಚ್.ಡಿ.ಕೋಟೆ: ಪಟ್ಟಣದ ಪೊಲೀಸ್ ಠಾಣೆಗೆ ನೂತನವಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ನಿಯೋಜನೆಗೊಂಡಿರುವ ಎಸ್.ಗಂಗಾಧರ್ ಅವರನ್ನು ಅವರ ಸ್ವ ಗ್ರಾಮವಾದ ರತ್ನಪುರಿಯ ಗ್ರಾಮಸ್ಥರು ಹಾಗೂ ಮುಖಂಡರು ಸನ್ಮಾನಿಸಿದರು.

ಗ್ರಾಮದ ದಸಂಸ ಮುಖಂಡ ರತ್ನಪುರಿ ಪುಟ್ಟಸ್ವಾಮಿ ಮಾತನಾಡಿ, ಎಸ್.ಗಂಗಾಧರ್ ಅವರು ಬಡ ಕುಟುಂಬದಿಂದ ಬಂದಿದ್ದು ಶಿಕ್ಷಣವನ್ನು ಸವಾಲಾಗಿ ತೆಗೆದುಕೊಂಡು ವಿದ್ಯಾಭ್ಯಾಸ ಮಾಡಿ ಉದ್ಯೋಗ ಪಡೆದು ಗ್ರಾಮಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದ್ದಾರೆ. ಅವರು ತಮ್ಮ ಸೇವಾ ಅವಧಿಯಲ್ಲಿ ನಿಯೋಜನೆಗೊಂಡ ಪೊಲೀಸ್ ಠಾಣೆಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಬರುವುದಕ್ಕಿಂತ ಮುನ್ನ ಹಾಸನ ಜಿಲ್ಲೆಯ ಆಲೂರು ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು. ನಮ್ಮ ತಾಲೂಕಿನಲ್ಲಿ ಉತ್ತಮ ಸೇವೆ ಮಾಡಲಿ ಎಂದು ಆಶಿಸಿದರು.

ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವೈ.ಪ್ರಸನ್ನ, ಮಹಾದೇವ ಸ್ವಾಮಿ, ಶಿವರಾಮು, ಶಿವು, ಹೆಗ್ಗನೂರು ನಿಂಗರಾಜು, ಮುತ್ತು ಉಯ್ಯಂಬಳ್ಳಿ ಇದ್ದರು.