ಪೊನ್ನಂಪೇಟೆಯಲ್ಲಿ ಈದ್ ಮಿಲಾದ್ ರ‌್ಯಾಲಿಯಲ್ಲಿ ಧಪ್ ನಡೆಯಿತು. 
ನ್ಯೂಸ್

ಪೊನ್ನಂಪೇಟೆಯಲ್ಲಿ ದಫ್ ಹಾಡಿಗೆ ಮಕ್ಕಳ ಹೆಜ್ಜೆ

ಗೋಣಿಕೊಪ್ಪ: ಪೊನ್ನಂಪೇಟೆ ಶಾಫಿ ಜುಮ್ಮಾ ಮಸೀದಿ, ಕಾಟ್ರಕೊಲ್ಲಿ ಮುಹಿಯದ್ದೀನ್ ಜುಮ್ಮಾ ಮಸೀದಿ ಮತ್ತು ಅನಫಿ ಜುಮ್ಮಾ ಮಸೀದಿ ಆಶ್ರಯದಲ್ಲಿ ಈದ್ ಮಿಲಾದ್ ರ‌್ಯಾಲಿಯನ್ನು ಭಾನುವಾರ ಪೊನ್ನಂಪೇಟೆಯಲ್ಲಿ ಆಚರಿಸಲಾಯಿತು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಮುಖ್ಯ ರಸ್ತೆಯ ಮೂಲಕ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ರ‌್ಯಾಲಿಯುದ್ದಕ್ಕೂ ಪ್ರವಾದಿ ಮಹಮ್ಮದ್ ಪೈಗಂಬರರ ಸಂದೇಶಗಳನ್ನು ಸಾರಿದರು. ಮಕ್ಕಳು ದಫ್ ಹಾಡಿಗೆ ಹೆಜ್ಜೆ ಹಾಕಿದರು. ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಆಲಿರ ಅಬ್ದುಲ್ ರಶೀದ್, ಪ್ರಮುಖರಾದ ಮುತವಲ್ಲಿ ಆಲಿರ ಎರ್ಮು ಹಾಜಿ, ಅಜೀಜ್, ಶಾಫಿ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಹಾಜಿ, ಉಪಾಧ್ಯಕ್ಷ ಸಿ.ಎಂ.ಆಶ್ರಫ್, ಕಾರ್ಯದರ್ಶಿ ಅಜೀಜ್, ಮೌಲ್ವಿಗಳಾದ ನಾಸಿರ್ ಫೈಜಿ, ಅನಫಿ ಜುಮ್ಮಾ ಮಸೀದಿ ಕಾರ್ಯದರ್ಶಿ ಮುಹಿಸಿನ್, ಮುಸ್ತಫ ಇದ್ದರು.