ನ್ಯೂಸ್

ಪೈ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳ ಮಳಿಗೆ ಆರಂಭ

ದೇಶದ ಹೆಸರಾಂತ ಸಂಸ್ಥೆಗಳಲ್ಲಿ ಒಂದಾಗಿರುವ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ಮಳಿಗೆ ಆರಂಭಿಸಿದೆ.

ಕುವೆಂಪುನಗರದ ನೃಪತುಂಗ ರಸ್ತೆಯಲ್ಲಿರುವ ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ನೂತನ ಮಳಿಗೆಯನ್ನು ಶನಿವಾರ ನಟ ಉಪೇಂದ್ರ ಉದ್ಘಾಟಿಸಿದರು. ಇದು ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ 220ನೇ ಮಳಿಗೆಯಾಗಿದೆ. ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಅನೇಕ ಕಡೆ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ.

ನಟ ಉಪೇಂದ್ರ ಮಾತನಾಡಿ, ರಾಜ್‌ಕುಮಾರ ಎಸ್.ಪೈ ಅವರು ಮೈಸೂರಿನಲ್ಲಿ ಮಳಿಗೆ ತೆರೆದು ಗ್ರಾಹಕರಿಗೆ ಉತ್ತಮ ವೇದಿಕೆ ಒದಗಿಸಿದ್ದಾರೆ. ಹೀಗೆಯೇ ಕಂಪನಿಗಳನ್ನು ಸ್ಥಾಪನೆ ಮಾಡಿ, ಉದ್ಯೋಗ ನೀಡಲಿ ಎಂದು ಶುಭ ಕೋರಿದರು.

ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರಾಜ್‌ಕುಮಾರ್ ಎಸ್.ಪೈ ಮಾತನಾಡಿ, ಮೈಸೂರಿನ ಕುವೆಂಪುನಗರದಲ್ಲಿ ನೂತನ ಮಳಿಗೆ ತೆರೆದು ಎಲೆಕ್ಟ್ರಾನಿಕ್ಸ್ ಮತ್ತು ಗೃಹಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಕಡಿಮೆ ಬೆಲೆಗೆ ಸಿಗುವ ವಸ್ತುಗಳು ಬೇರೆ ಕಡೆ ಸಿಗುವುದಿಲ್ಲ. ಗ್ರಾಹಕರಿಗೆ ಅನುಕೂಲಕರವಾದ ವಾತಾವರಣ ಇದೆ ಎಂದರು.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನಮ್ಮ ಕಂಪನಿಯ ಶಾಖೆಗಳಿದ್ದು, ಎಲ್ಲ ಕಡೆ ಗ್ರಾಹಕರಿಂದ ಮೆಚ್ಚುಗೆ ಗಳಿಸಿದೆ. ಲ್ಯಾಪ್‌ಟಾಪ್, ಮೊಬೈಲ್, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗಲಿದೆ ಎಂದು ತಿಳಿಸಿದರು.

ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿ.ನ ಹಣಕಾಸು ನಿರ್ದೇಶಕಿ ಮೀನಾ ರಾಜ್‌ಕುಮಾರ್ ಪೈ, ನಿರ್ದೇಶಕರಾದ ರಾಹುಲ್ ಆರ್.ಪೈ, ರೋಹಿತ್ ಆರ್.ಪೈ ಇದ್ದರು. ನಟ ಉಪೇಂದ್ರ ಬಂದಿದ್ದ ಕಾರಣ ಮಳಿಗೆಯ ಮುಂದೆ ಅಪಾರ ಸಂಖ್ಯೆಯಲ್ಲಿ ಜನ ಸೇರಿಸಿದ್ದರು.

ಆಕರ್ಷಕ ಕೊಡುಗೆಗಳು

ನೂತನ ಮಳಿಗೆಯಲ್ಲಿ ಆಕರ್ಷಕ ಕೊಡುಗೆಗಳನ್ನು ಗ್ರಾಹಕರಿಗೆ ನೀಡಲಾಗಿದೆ. 100 ಇಂಚು ಟಿವಿ ಖರೀದಿಸಿದರೆ ಉಚಿತ ಐಪ್ಯಾಡ್, ಲ್ಯಾಪ್‌ಟಾಪ್ ಖರೀದಿಸಿದರೆ ಲ್ಯಾಪ್‌ಟಾಪ್ ಬ್ಯಾಗ್, 5,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿದರೆ ನೀರಿನ ಬಾಟಲಿ, 7,500 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿದರೆ ಮ್ಯಾಗ್ನಮ್ ಟಿಫಿನ್ ಬಾಕ್ಸ್, 10 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿದರೆ ಆರ್‌ಬಿ ಕಡಾಯ, 15 ಸಾವಿರ ರೂ. ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿದರೆ ದಿಂಬನ್ನು ಉಚಿತವಾಗಿ ಪಡೆಯಲು ಶನಿವಾರ ಅವಕಾಶ ನೀಡಲಾಯಿತು.

2 ಸಾವಿರ ರೂ. ಮೌಲ್ಯದ ಪ್ರತಿಯೊಂದು ಖರೀದಿಯ ಮೇಲೆ ಗ್ರಾಹಕರಿಗೆ ಉಚಿತ ಕೂಪನ್ ಸಿಗಲಿದೆ. ಪೈ ಮೆಗಾ ೆಸ್ಟಿವಲ್ ಸೇಲ್‌ನಲ್ಲಿ 25 ಕಾರುಗಳನ್ನು ಗೆಲ್ಲುವ ಮತ್ತು 17 ಕೋಟಿ ರೂ. ಮೌಲ್ಯದ ಪೈ ಲಾಯಲ್ಟಿ ಪಾಯಿಂಟ್‌ಗಳನ್ನು ಮರುಪಾವತಿಸುವ ಅವಕಾಶವನ್ನು ನೀಡುತ್ತದೆ. ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಅತ್ಯಾಕರ್ಷಕ ಉಡುಗೊರೆಗಳು ನೀಡಲಿದೆ.