ನ್ಯೂಸ್

ಪೆಟ್ರೋಲ್ ಬಂಕ್ ಪ್ರಸ್ತಾವನೆ: ಕಾರ್ಕಳ ವ್ಯಕ್ತಿಗೆ 15 ಲಕ್ಷ ರೂ,ವಂಚನೆ

  • ಉಡುಪಿ: ಪೆಟ್ರೋಲಿಯಂ ಡಿಸೀಲ್ ಹಾಗೂ ಇತರ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ನೀಡುವುದಾಗಿ ಮುಂಬೈ ಕಂಪೆನಿಯೊಂದು ಕಾರ್ಕಳ ವ್ಯಕ್ತಿಗೆ 15 ಲಕ್ಷ ರೂ, ವಂಚಿಸಿದ ಘಟನೆ ಬಗ್ಗೆ ದೂರು ದಾಖಲಾಗಿದೆ, ಎರ್ಲಪಾಡಿ ಗ್ರಾಮದ, ಜಾರ್ಕಳ ನಿವಾಸಿ ರಮೇಶ್ ಶೆಟ್ಟಿ ವಂಚನೆಗೊಳಗಾದವರು. ಮುಂಬೈನಲ್ಲಿರುವ ಮೈ ಓನ್ ಇಕೊ ಎನರ್ಜಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯು
    ದೇಶದ ವಿವಿಧ ಪ್ರಾಂತ್ಯಗಳಿಂದ ಪೆಟ್ರೋಲಿಯಂ ಡಿಸೀಲ್ ಹಾಗೂ ಇತರ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಇದನ್ನು ಗಮನಿಸಿದ ರಮೇಶ್ ಶೆಟ್ಟಿ ಅವರು, ಕಂಪೆನಿಯನ್ನು ಸಂಪರ್ಕಿಸಿ ಪೆಟ್ರೋಲಿಯಂ ಉತ್ಪನ್ನ ಮಾರಾಟವನ್ನು ಕಾರ್ಕಳ ಕಸಬ ಗ್ರಾಮದಲ್ಲಿ ವ್ಯವಹಾರ ಮಾಡುವುದಾಗಿ ಪ್ರಸ್ತಾಪವನ್ನು ನೀಡಿದ್ದರು. ಭದ್ರತಾ ಠೇವಣಿಯಾಗಿ 15 ಲಕ್ಷ ರೂ, ಹಣವನ್ನು ಆನ್ ಲೈನ್ ಮೂಲ ಪಾವತಿಸಿದ್ದಾರೆ. ಸಂಸ್ಥೆಯು ಕಾನೂನಿನ ವಿಧಾನಗಳನ್ನು ಪೂರೈಸುವ ಬದಲಾಗಿ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ವಂಚನೆ ಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.