ನ್ಯೂಸ್

ಪೂರ್ವಗ್ರಹ ತೊಡೆದು ಹಾಕಿದ ಕೀರ್ತಿ ಅಕ್ಕಮಹಾದೇವಿಗೆ ಸಲ್ಲುತ್ತದೆ

ಚಿತ್ರದುರ್ಗ: ಸ್ತ್ರೀ ವಾದವೆಂದರೆ ಏನೆಂಬುದು ಗೊತ್ತಿರದ ಕಾಲದಲ್ಲಿ ಮಹಿಳೆಯರಿಗೆ ಗೌರವ ತಂದುಕೊಟ್ಟಂಥ ಶರಣೆ ಅಕ್ಕಮಹಾದೇವಿ ಕನ್ನಡನಾಡಿ ನಲ್ಲಿದ್ದರು ಎನ್ನುವುದೇ ಒಂದು ವಿಸ್ಮಯವೆಂದು ನಿವೃತ್ತ ಪ್ರಾಧ್ಯಾಪಕಿ ಡಾ.ಪಿ.ಯಶೋಧಾರಾಜಶೇಖರಪ್ಪ ಹೇಳಿದರು.
ಜಾಗತಿಕ ಲಿಂಗಾಯಿತ ಮಹಾಸಭಾ ಜಿಲ್ಲಾ ಮಹಿಳಾ ಘಟಕದಿಂದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಈಚೆ ಗೆ ಏರ್ಪಡಿಸಿದ್ದ ತಿಂಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಧನೆಗಾಗಿ ಸಮಾಜವನ್ನು ಎದುರು ಹಾಕಿಕೊಂಡು, ಮಹಿಳೆ ಒಂಟಿಯಾಗಿ ಹೋಗುವುದು ಸಾಧ್ಯವಿಲ್ಲವೆನ್ನುವ ನಿಲುವು ತೊಡೆದು ಹಾಕಿದ ಕೀರ್ತಿ ಅಕ್ಕನಿಗೆ ಸಲ್ಲುತ್ತದೆ. ಹೊಸ ಪರಂಪರೆ ಕಟ್ಟಿಕೊಡುವುದರೊಂದಿಗೆ ತನಗೆ ಅನಿಸಿದ್ದನ್ನು ನಿರ್ಭಿತಿಯಿಂದ ಅಕ್ಕಮಹಾದೇವಿ ಹೇ ಳಿದ್ದಾರೆ ಎಂದರು.
ಜಾಗತಿಕ ಲಿಂಗಾಯಿತ ಮಹಾಸಭಾದ ಸಹ ಸಂಚಾಲಕ ಜಿ.ಟಿ.ನಂದೀಶ ಮಾತನಾಡಿ,ಭಾರತೀಯ ಪರಂಪರೆಯಲ್ಲಿ ಸಂಕ್ರಾಂತಿ ಹಬ್ಬ ದ ಸಾಂಸ್ಕೃತಿಕ ವಿಶೇಷತೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಶೈಲಜಾಬಾಬು,ಉಪನ್ಯಾಸಕಿ ರಶ್ಮಿ ಮಾತನಾಡಿದರು.
ಲಿಂಗಾಯಿತ ಮಹಾಸಭಾ ಮಹಿಳಾ ಘ ಟಕದ ಕಾರ್ಯದರ್ಶಿ ಜಯಶೀಲಾವೀರಣ್ಣ,ಶೋಭಾಮಲ್ಲಿಕಾರ್ಜುನ್, ಬಸವರಾಜಕಟ್ಟಿ, ಡಿ.ಎಂ.ಧನಂಜಯ,ಶಿವಾನಂದ, ವರ್ಷಾ ಮತ್ತಿತರರು ಇದ್ದರು. ಮೀನಾಕ್ಷಿ ಸ್ವಾಗತಿಸಿ,ವೀಣಾ ವಂದಿಸಿದರು. ಗೀತಾ ನಿರೂಪಿಸಿದರು.

(ಸಿಟಿಡಿ 13 ಪಿ.ಯಶೋಧಾರರಾಜಶೇಖರಪ್ಪ)ಮಗ್‌ಶಾಟ್.