ಕಳಸ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಮಲಯಾಳಿ ಬಾಂಧವರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮಾವೇಲಿ ರಾಜನು ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳ ಸಂಕಷ್ಟ ಪರಿಹರಿಸುತ್ತಾನೆ ಎಂಬ ನಂಬಿಕೆಯಲ್ಲಿ ಓಣಂ ಹಬ್ಬ ಆಚರಿಸಲಾಗುತ್ತದೆ. ಅತ್ತ ನಕ್ಷತ್ರದಿಂದ ತಿರುವೋಣಂ ವರೆಗಿನ 10 ದಿವಸಗಳಲ್ಲಿ ಬರುವ ಮಾವೇಲಿಯನ್ನು ಸ್ವಾಗತಿಸುವುದಕ್ಕಾಗಿ ಓಣಂ ಹಬ್ಬ ನಡೆಸಲಾಗುತ್ತದೆ.
ಹತ್ತನೆಯ ದಿನವನ್ನು ಹಲವಾರು ಬಗೆಯ ಹೂಗಳಿಂದ ಪೂಕಳಂ ರಚಿಸಿ ಮಲಯಾಳಿ ಬಂಧು ಬಾಂಧವರೊಂದಿಗೆ ಹಬ್ಬ ಆಚರಿಸಿದರು. ಮನೆಯ ನೆರೆಹೊರೆಯವರನ್ನು ಕರೆದು ಸಿಹಿ ಊಟವನ್ನು ಹಾಕಿ ಸಂಭ್ರಮಿಸಿದರು. ಸಿಹಿಯೂಟದಲ್ಲಿ ಮಲಯಾಳಿಗಳ ವಿಶೇಷ ಖಾದ್ಯಗಳಾದ ಉಳ್ಳಿ ಕರಿ, ಇಂಜಿ ಕರಿ, ಅವಿಯಲ್, ತಿಯಾಲ್, ಪಾಯಸ ಮುಂತಾದ ವಿಶೇಷ ಖಾದ್ಯಗಳನ್ನು ಮಾಡಲಾಗಿತ್ತು.