ಚಿತ್ರದುರ್ಗ: 2021ರಲ್ಲಿ ಮುದ್ರಣಗೊಂಡ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಇನ್ನಿತರ ಭಾರತೀಯ ಭಾಷೆಗಳ ಆಂಗ್ಲ, ಹಿಂದಿ ಮತ್ತು ಭಾರತೀಯ ಇತರೆ ಭಾಷಾ ಪುಸ್ತಕಗಳ ಆಯ್ಕೆಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಆಯ್ಕೆ ಸಮಿತಿ ಪೂರ್ಣಗೊಳಿಸಿದೆ. ಆಯ್ಕೆಯಾದ ಪುಸ್ತಕಗಳನ್ನು ಇಲಾಖೆ ವೆಬ್‌ಸೈಟ್‌ಟ್ಝ.ಚ್ಟ್ಞಠಿ.ಜಟ.ಜ್ಞಿನಲ್ಲಿ ಶನಿವಾರ ಪ್ರಕಟಿಸಿದೆ. ಲೇಖಕರು, ಪ್ರಕಾಶಕರು, ಪುಸ್ತಕ ಸರಬರಾಜುದಾರರು, ಪುಸ್ತಕಗಳು, ಲೇಖಕರು, ಪ್ರಕಾಶಕರು, ಪುಸ್ತಕ ಸರಬರಾಜುದಾರರ ಹೆಸರು, ಪುಟ ಸಂಖ್ಯೆ, ಮುಖಬೆಲೆ ಇತ್ಯಾದಿ ವ್ಯತ್ಯಾಸಗಳಿದ್ದಲ್ಲಿ ಮಾ.18ರೊಳಗೆ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯಗೋಪುರ, 4ನೇ ಮಹಡಿ, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು ಇವರಿಗೆ ಲಿಖಿತವಾಗಿ ಅಥವಾ ಇ-ಮೇಲ್ ಮೂಲಕ ಮನವಿ ಮಾಡಬಹುದು ಎಂದು ನಗರದ ಕೇಂದ್ರ ಗ್ರಂಥಾಲಯದ ಮುಖ್ಯಗ್ರಂಥಾಲಯಾಧಿಕಾರಿ ಬಸವರಾಜಕೊಳ್ಳಿ ತಿಳಿಸಿದ್ದಾರೆ.