ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗಾಯಕಿ ಮತ್ತು ಸಮಾಜ ಸೇವಕಿ ಅನಿತಾ ಸಾ.ರಾ. ಮಹೇಶ್ ಉದ್ಘಾಟಿಸಿದರು.ಡಾ. ವೈ.ಡಿ.ರಾಜಣ್ಣ, ಡಿಂಡಿಮ ಶಂಕರ್, ಡಾ.ಡಿ. ನಟರಾಜ್, ರಾಮಕೃಷ್ಣ, ಸಿ.ಆರ್.ಉದಯಕುಮಾರ್, ಎಂ.ಡಿ. ದಾಕ್ಷಾಯಿಣಿ, ಸ್ವರೂಪಾ ರಾಣಿ, ಸೌಮ್ಯ, ಶ್ರುತಿ, ರೇಣುಕಾ ಇನ್ನಿತರರು ಇದ್ದರು. 
ನ್ಯೂಸ್

ಪುರುಷರಿಗಿಂತ ಕಡಿಮೆ ಇಲ್ಲವೆಂದು ಮಹಿಳೆ ಸಾಬೀತು

ಕೆ.ಆರ್.ನಗರ: ವಿಶ್ವದಲ್ಲೇ ಮಹಿಳೆಯರನ್ನು ಗೌರವ ಮತ್ತು ಪೂಜ್ಯ ಭಾವನೆಯಿಂದ ಕಾಣುವ ಏಕೈಕ ರಾಷ್ಟ್ರ ಭಾರತ. ಇಂತಹ ದೇಶದಲ್ಲಿ ಮಹಿಳೆಯರಿಗೆ ಆರ್ಥಿಕತೆಯೊಂದಿಗೆ ಸ್ವಾತಂತ್ರ್ಯ ನೀಡಿದಲ್ಲಿ ವಿಶ್ವದಲ್ಲಿ ಭಾರತ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ತಾಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಇಂದು ಎಲ್ಲ ರಂಗಗಳಲ್ಲಿ ಯಶಸ್ವಿ ಕಾರ್ಯನಿರ್ವಹಣೆ ಮಾಡುವ ಮೂಲಕ ಪುರುಷರಿಗಿಂತ ಕಡಿಮೆ ಇಲ್ಲ ಎಂದು ತೋರ್ಪಡಿಸಿದ್ದಾರೆ ಎಂದರು.

ಗಾಯಕಿ ಮತ್ತು ಸಮಾಜ ಸೇವಕಿ ಅನಿತಾ ಸಾ.ರಾ. ಮಹೇಶ್ ಮಾತನಾಡಿ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿ ಅವರ ಆರ್ಥಿಕ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಗಾಮೆರ್ಂಟ್ ಆರಂಭಿಸಲಾಗಿದೆ. ವಿಶ್ವ ಮಹಿಳಾ ದಿನಾಚರಣೆ ನಡೆಯುವ ದಿನದಂದೇ ಪಟ್ಟಣ ಹೊರವಲಯದ ಕಗ್ಗೆರೆ ಗ್ರಾಮದ ಬಳಿ ಸಾ.ರಾ. ನಿಧಿ ಗಾಮೆರ್ಂಟ್ಸ್ ಪ್ರಾರಂಭವಾಗಿ ಮಹಿಳೆಯರಿಗೆ ಉದ್ಯೋಗದೊಂದಿಗೆ ಬಂದ ಲಾಭವನ್ನು ಸದಸ್ಯ ಮಹಿಳೆಯರಿಗೆ ನೀಡಿ ಆರ್ಥಿಕವಾಗಿ ಸಬಲರಾಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಎಂ.ಡಿ. ದಾಕ್ಷಾಯಿಣಿ, ಹೊಸಅಗ್ರಹಾರ ಹೋಬಳಿ ಕಸಾಪ ಅಧ್ಯಕ್ಷೆ ಸ್ವರೂಪಾರಾಣಿ ಮಾತನಾಡಿದರು. ಅನಿತಾ ಸಾ.ರಾ.ಮಹೇಶ್, ಸಂಗೀತ ವಿದ್ವಾಂಸರಾದ ರಮಾಮಣಿ, ಹೊಸ ಅಗ್ರಹಾರ ಹೋಬಳಿ ಕಸಾಪ ಅಧ್ಯಕ್ಷೆ ಸ್ವರೂಪಾ ರಾಣಿ ಅವರನ್ನು ಸನ್ಮಾಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಗೌರವಾಧ್ಯಕ್ಷ ಡಾ.ಡಿ. ನಟರಾಜ್, ಉಪಾಧ್ಯಕ್ಷ ರಾಮಕೃಷ್ಣ, ಗೌರವ ಕಾರ್ಯದರ್ಶಿ ಸಿ.ಆರ್. ಉದಯಕುಮಾರ್, ಸಂಘಟನಾ ಕಾರ್ಯದರ್ಶಿ ರಾಮಶೆಟ್ಟಿ, ನಗರ ಘಟಕ ಅಧ್ಯಕ್ಷ ಸಿ.ವಿ. ಮೋಹನ್‌ಕುಮಾರ್, ಜಿಲ್ಲಾ ಗೌರವ ಕೋಶದ ಅಧ್ಯಕ್ಷ ಜಿ. ಪ್ರಕಾಶ್, ಸದಸ್ಯರಾದ ಶೇಷ ಅಯ್ಯಂಗಾರ್, ತಿಮ್ಮಶೆಟ್ಟಿ, ಹೆಗ್ಗಂದೂರು ಪ್ರಭಾಕರ, ಭಾಗ್ಯಮ್ಮ, ಸೌಮ್ಯಾ, ಶ್ರುತಿ, ರೇಣುಕಾ ಸೇರಿದಂತೆ ಇನ್ನಿತರರು ಹಾಜರಿದ್ದರು.