ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್‌ನಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯಲ್ಲಿ ಚರ್ಚ್ ಧರ್ಮಗುರು ೌಲ್ ಡಿಸೋಜಾ, ್ರಾನ್ಸಿಸ್, ಒ.ಡಿ.ಸ್ಟೀನ್, ರಿಚರ್ಡ್, ಸೈಮನ್ ಇತರರಿದ್ದರು.  
ನ್ಯೂಸ್

ಪುರುಷರ ನಿಸ್ವಾರ್ಥ ಸೇವೆ ಶ್ಲಾಘನೀಯ

ಬಾಳೆಹೊನ್ನೂರು: ಸಮಾಜ ಹಾಗೂ ಕುಟುಂಬದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಪುರುಷರ ಕಾರ್ಯ ಶ್ಲಾಘನೀಯ ಎಂದು ವಿಜಯಮಾತೆ ಚರ್ಚ್ ಧರ್ಮಗುರು ೌಲ್ ಡಿಸೋಜಾ ಹೇಳಿದರು.

ಪಟ್ಟಣದ ವಿಜಯಮಾತೆ ಚರ್ಚ್‌ನಲ್ಲಿ ವಿಜಯಮಾತೆ ಮೆನ್ಸ್ ಕ್ಲಬ್ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪುರುಷರು ಕುಟುಂಬ ಮತ್ತು ಸಮಾಜದ ಪ್ರಧಾನ ಆಧಾರ ಸ್ತಂಭವಾಗಿದ್ದು ಎಲ್ಲ ರಂಗಗಳಲ್ಲಿಯೂ ಪುರುಷರು ಸೇವೆ, ಕೊಡುಗೆ ಸಲ್ಲಿಸುತ್ತಿದ್ದಾರೆ. ಪುರುಷರಿಲ್ಲದ ಸಮಾಜದ ಪರಿಕಲ್ಪನೆ ಅಸಾಧ್ಯ ಎಂದರು. ಪುರುಷರ ದಿನದ ಸಂದರ್ಭದಲ್ಲಿ ಎಲ್ಲ ಪುರುಷರು ಜೀವನದ ಆಗುಹೋಗುಗಳನ್ನು, ಸಾಧನೆ, ಏಳೂಬೀಳುಗಳನ್ನು ಮನನ ಮಾಡಿಕೊಂಡು ಮುಂದೆ ಸಾಗಬೇಕಿದೆ ಎಂದು ಹೇಳಿದರು.

ಮೆನ್ಸ್ ಕ್ಲಬ್ ಕಾರ್ಯದರ್ಶಿ ್ರಾನ್ಸಿನ್ ಜೋವಿಯರ್, ಸದಸ್ಯರಾದ ಒ.ಡಿ.ಸ್ಟೀನ್, ರಿಚರ್ಡ್ ಮಥಾಯಿಸ್, ಸೈಮನ್, ರೋನಿ, ಜಾನ್, ಲ್ಯಾನ್ಸಿ, ಅಲಾನೋ ಕೊಯಿಲ್ ಮತ್ತಿತರರಿದ್ದರು.