ಕೆ.ಆರ್.ನಗರ: ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸೈಯದ್ ಸಿದ್ದಿಕ್ ಅವಿರೋಧವಾಗಿ ಆಯ್ಕೆಯಾದರು. 23 ಸದಸ್ಯ ಸ್ಥಾನಗಳನ್ನು ಹೊಂದಿರುವ ಪುರಸಭೆಯಲ್ಲಿ, ಆಗಿದ್ದ ಒಪ್ಪಂದದಂತೆ ಕೋಳಿ ಪ್ರಕಾಶ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು.
ಅಧ್ಯಕ್ಷ ಗಾಧಿ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಸೈಯದ್ ಸಿದ್ದಿಕ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಸಿದ್ದಿಕ್ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ಎಸ್.ಸಂತೋಷ್ ಘೋಷಿಷಿದರು.
ಪುರಸಭೆ ಉಪಾಧ್ಯಕ್ಷೆ ಸೌಮ್ಯಾ ಲೋಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ಸ್ವಾಮಿ, ಸದಸ್ಯರಾದ ಕೋಳಿಪ್ರಕಾಶ್, ಕೆ.ಜಿ.ಸುಬ್ರಮಣ್ಯ, ಕೆ.ಎಲ್.ಜಗದೀಶ್, ಸಂತೋಷ್‌ಗೌಡ, ಜಾವೀದ್ ಪಾಷಾ, ಶಿವುನಾಯಕ್, ಉಮೇಶ್, ನಟರಾಜು, ಮಿಕ್ಸರ್ ಶಂಕರ್, ಮಂಜುಳಾ ಚಿಕ್ಕವೀರು, ಕೆ.ಬಿ.ವೀಣಾ ವೃಷಬೇಂದ್ರಪ್ಪ, ಅಶ್ವಿನಿ ಪುಟ್ಟರಾಜು, ಪಲ್ಲವಿ ಆನಂದ್, ವಸಂತಮ್ಮ ಕೃಷ್ಣೇಗೌಡ, ಶಾರಾದ ನಾಗೇಶ್, ವಾಹಿದ ಬಾನು, ಅಪ್ರೂ ಉನ್ನೀಸ ಹಾಗೂ ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಹಾಜರಿದ್ದರು.
ಅಧ್ಯಕ್ಷರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಡಾ.ಬಾಬು ಜಗಜೀವನ ರಾಮ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರಲ್ಲದೆ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ನೂತನ ಅಧ್ಯಕ್ಷರನ್ನು ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಅಭಿನಂದಿಸಿದರು.
ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ಮುಖಂಡರಾದ ಲೋಕೇಶ್, ಪುಟ್ಟು, ಪ್ರಸನ್ನಕುಮಾರ್, ವಿನಯ್, ಕಾಮದೇನು ಧರ್ಮ ಮತ್ತಿತರರು ಹಾಜರಿದ್ದರು.