ಮೈಸೂರು: ಪಿಸ್ತೂಲ್ ಹಿಡಿದಿರುವ ಫೋಟೋವನ್ನು ಸಾವಾಜಿಕ ಜಾಲತಾಣದಲ್ಲಿ ಪೋಸ್ಟ್ ವಾಡಿದ್ದ ಯುವಕನ ವಿರುದ್ಧ ನಗರದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಗಂಧ ದ್ರವ್ಯ ಅಂಗಡಿಯಲ್ಲಿ ಕೆಲಸ ವಾಡುವ ಅಜೀಜ್ ಶರೀಫ್ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು, ಬಂಧನಕ್ಕೆ ಮುಂದಾಗಿದ್ದಾರೆ. ಸಾವಾಜಿಕ ಜಾಲತಾಣಗಳನ್ನು ಪರಿಶೀಲಿಸುವ ವೇಳೆ ಅಜೀಜ್ ಶರೀಫ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಪಿಸ್ತೂಲ್ ಹಿಡಿದು ಫೋಸ್ ನೀಡಿರುವ ಫೋಟೋವನ್ನು ಅಪರಾಧ ವಿಭಾಗದ ಪ್ರೇಮ್‌ಕುವಾರ್ ಗಮನಿಸಿದ್ದಾರೆ. ಸಾರ್ವಜನಿಕರಿಗೆ ಭಯ ಉಂಟು ವಾಡವ ರೀತಿಯಲ್ಲಿ ಪಿಸ್ತೂಲ್ ಹಿಡಿದಿದ್ದ ಯುವಕನ ಬಗ್ಗೆ ವಾಹಿತಿ ಕಲೆಹಾಕಿ, ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.