ನಗರದ ಸುಮಾರು 15 ಕಡೆ ಭಾರತೀಯ ಪಿರಮಿಡ್ ಸಂಸ್ಥೆ ವತಿಯಿಂದ ಪಿರಮಿಡ್ ಧ್ಯಾನ ಕುರಿತ ಅರಿವು ಹಾಗೂ ಅಭ್ಯಾಸ ವ್ಯವಸ್ಥೆ ಮಾಡಲಾಗಿದೆ ಎಂದು ಪಿರಮಿಡ್ ಧ್ಯಾನಿ ಚನ್ನಬಸವ ತಿಳಿಸಿದರು.
ಪಿರಮಿಡ್ ಆಕೃತಿಯೊಳಗೆ ಇಟ್ಟ ತರಕಾರಿ, ಹಣ್ಣು ಮೊದಲಾದವು ಸುಮಾರು 20 ದಿನವಾದರೂ ಬಾಡದೇ, ಕೊಳೆಯದೇ ಇರುವುದು, ಈಜಿಪ್ಟ್‌ನ ಪಿರಿಮಿಡ್‌ಗಳಲ್ಲಿ ಶವಗಳು ಇಂದಿಗೂ ಕೊಳೆಯದೇ ಇರುವುದು ಎಲ್ಲರ ಗಮನಕ್ಕೆ ಬಂದಿದೆ. ಪಿರಮಿಡ್ ಧ್ಯಾನದಿಂದ ಜೀವಿತಾವಧಿಯೂ ಹೆಚ್ಚುತ್ತದೆ. ಹೀಗಾಗಿ ಭಾರತೀಯ ಪಿರಮಿಡ್ ಧ್ಯಾನ ಸಂಸ್ಥೆ ಈ ರೀತಿಯ ಕೇಂದ್ರಗಳನ್ನು ದೇಶಾದ್ಯಂತ ಆರಂಭಿಸಿದ್ದು, ಉಚಿತ ಸೌಲಭ್ಯ ನೀಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿ ಚಿಕ್ಕಲೂರು ಮಂಚೇಗೌಡ, ಅನಿತಾ, ಸಿದ್ದೇಗೌಡ, ಡಾ.ವಿಶ್ವೇಶ್ವರಯ್ಯ, ದೇಶಹಳ್ಳಿ ರಾಮಚಂದ್ರಾಚಾರ್ ಇದ್ದರು.