ಮೈಸೂರು: ಈ ಬಾರಿಯ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಮೈಸೂರಿನ ಲರ್ನರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಸ್.ಇಂಚರಾ ವಿಜ್ಞಾನ ವಿಭಾಗದಲ್ಲಿ ಶೇ.87.5 (525) ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.
ಇಂಚರಾ ತೋಟಗಾರಿಕೆ ಇಲಾಖೆಯ ಅಧಿಕಾರಿ, ಹೆಬ್ಬಾಳಿನ ನಿವಾಸಿ ಕೆ.ಎಂ.ಸತೀಶ್ ಮತ್ತು ಎಸ್.ಆರ್.ಶೀಲಾ ಅವರ ಪುತ್ರಿಯಾಗಿದ್ದಾರೆ. ಇಂಚರಾ ಅವರ ಸಾಧನೆಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು ಅಭಿನಂದನೆ ಸಲ್ಲಿಸಿದ್ದಾರೆ.