ನ್ಯೂಸ್

ಪಿ.ಯು.ಫಲಿತಾಂಶ ಈ ವರ್ಷ ೧೦ರಲ್ಲಿ ಒಂದು ಸ್ಥಾನ ಗಳಿಸುವಂತೆ ಆಗಬೇಕು / ಪಿ.ಯು. ಡಿಡಿಪಿಐ ರಾಮಚಂದ್ರಪ್ಪ

ವಿಜಯವಾಣಿ ಸುದ್ದಿಜಾಲ ಕೋಲಾರ
ದೇಶದ ಸಂಪನ್ಮೂಲ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗಿದೆ. ಅದರ ವಿಕೇಂದ್ರೀಕರಣ ಆಗಿ ಸಂಪತ್ತು ಸಮಾನವಾಗಿ ಹಂಚಿಕೆಯಾಗುವ ವ್ಯವಸ್ಥೆ ಬರಬೇಕು ಎಂದು ಡಿಡಿಪಿಯು ರಾಮಚಂದ್ರಪ್ಪ ತಿಳಿಸಿದರು.

ಶುಕ್ರವಾರ ಕೋಲಾರ ಜಿಲ್ಲಾ ಅರ್ಥಶಾಸ್ತç ಅಧ್ಯಯನ ಕೇಂದ್ರವು ಅಂತರಗAಗೆ ರಸ್ತೆಯ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿಷಯಾಧಾರಿತ ಕಾರ್ಯಾಗಾರ ಮತ್ತು ಸಂವಾದ ಹಾಗೂ ದ್ವಿತೀಯ ಪಿಯುಸಿ ಅರ್ಥಶಾಸ್ತç ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಅರ್ಥವ್ಯವಸ್ಥೆಯ ಸಂಕೀರಣತೆಯನ್ನು ಮಕ್ಕಳಿಗೆ ವಿವರಿಸಿ ಸರಳವಾಗಿ ಅರ್ಥೈಸುವಂತೆ ಮಾಡಬೇಕು ಎಂದು ಉಪನ್ಯಾಸಕರಿಗೆ ಸಲಹೆ ಮಾಡಿದರು.

ಕೊರೋನಾ ನಂತರ ಜಿಲ್ಲೆಯ ಪಿ.ಯು ಫಲಿತಾಂಶ ೨೧ನೇ ಸ್ಥಾನಕ್ಕೆ ಕುಸಿದಿದ್ದು, ಇಲಾಖೆಯಿಂದ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ನಿರಂತರ ಸಭೆಗಳನ್ನು ನಡೆಸಿ ಫಲಿತಾಂಶ ಸುಧಾರಣೆಗೆ ಹುರಿದುಂಬಿಸಿದ ಹಿನ್ನಲೆಯಲ್ಲಿ ಕಳೆದ ವರ್ಷ ೧೪ನೇ ಸ್ಥಾನಕ್ಕೆ ಬಂದಿದೆ. ಈ ವರ್ಷ ಕೋಲಾರ ಜಿಲ್ಲೆಯು ೧೦ ರಲ್ಲಿ ಒಂದು ಸ್ಥಾನ ಗಳಿಸುವಂತೆ ಪಿಯು ಉಪನ್ಯಾಸಕರು ಮಕ್ಕಳಿಗೆ ಗುಣಾತ್ಮಕ ಬೋಧನೆ ಮಾಡಬೇಕು ಎಂದು ಕರೆ ನೀಡಿದರು.

ಈ ವರ್ಷ ೮೦ ರಿಂದ ೨೦ ಅನುಪಾತದಲ್ಲಿ ಪರೀಕ್ಷಾ ಅಂಕಗಳು ಇರುತ್ತವೆ. ಉಪನ್ಯಾಸಕರು ಆಂತರಿಕ ಅಂಕಗಳನ್ನು ನೀಡುವ ಸಂದರ್ಭದಲ್ಲಿ ನಿಷ್ಠೂರವಾಗಿ ಇರಬೇಕು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಆಂತರಿಕ ಅಂಕಗಳನ್ನು ನೀಡಬೇಕು ಎಂದು ಡಿಡಿಪಿಯು ಕಿವಿ ಮಾತು ಹೇಳಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ದೇಶದಲ್ಲಿ ಸ್ವಾತಂತ್ರö್ಯ, ಸ್ವೇಚ್ಛಾಚಾರ ಆಗಿರುವ ರೀತಿಯಲ್ಲೇ ಸರ್ಕಾರಗಳ ಆರ್ಥಿಕ ನಿರ್ವಹಣೆಯೂ ಅಶಿಸ್ತಿಗೆ ಒಳಗಾಗಿದೆ. ಇದು ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಆತಂಕ ಉಂಟು ಮಾಡುವ ಮೊದಲು ಸರ್ಕಾರಗಳು ರಾಜಕೀಯ ಕಾರಣಗಳಿಗಾಗಿ ಸಾರ್ವಜನಿಕರ ಹಣದ ಸರ್ಕಾರಿ ಬೊಕ್ಕಸವನ್ನು ಮನಸೋ ಇಚ್ಛೆ ಬಳಸಿಕೊಳ್ಳುವುದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್ ಮಾತನಾಡಿ, ೨೦೨೯ರ ವೇಳೆಗೆ ಭಾರತವು ಅಮೇರಿಕ, ಇಂಗ್ಲೆAಡ್, ಚೈನಾದಂತಹ ಪ್ರಬಲ ರಾಷ್ಟçಗಳನ್ನು ಹಿಮ್ಮೆಟ್ಟಿಸಿ ಜಗತ್ತಿನ ೫ನೇ ಬಲಿಷ್ಟ ಆರ್ಥಿಕತೆಯ ದೇಶವಾಗಿ ರೂಪಗೊಳ್ಳಲಿದೆ. ಅದಕ್ಕೆ ಅನುಗುಣವಾಗಿ ದೇಶದ ತಳ ಆದಾಯ ಹೆಚ್ಚಾಗಬೇಕು. ರಾಜಕೀಯ ಮತ್ತು ಅರ್ಥ ವ್ಯವಸ್ಥೆ ಸಮತೋಲನದಲ್ಲಿ ಸಾಗಬೇಕು. ಇದಕ್ಕೆ ಸಜ್ಜುಗೊಳ್ಳುವಂತೆ ಯುವ ಪೀಳಿಗೆಯನ್ನು ರೂಪಿಸಬೇಕಾಗಿರುವುದು ಉಪನ್ಯಾಸಕರ ಕರ್ತವ್ಯ ಎಂದರು.

ಅರ್ಥಶಾಸ್ತç ಅಧ್ಯಯನ ಕೇಂದ್ರದ ಅಧ್ಯಕ್ಷ ಟಿ.ಚಂದ್ರಪ್ಪ ಮಾತನಾಡಿ, ಕಳೆದ ಒಂದು ದಶಕದಲ್ಲಿ ಆರಂಭದ ಹೆಜ್ಜೆಗಳನ್ನು ಯಾವುದೇ ಸಂದರ್ಭದಲ್ಲಿ ಬದಲಾಯಿಸದೆ ಅರ್ಥಶಾಸ್ತç ಉಪನ್ಯಾಸಕರ ಕಾರ್ಯಕ್ಷಮತೆ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಧ್ಯಯನ ಕೇಂದ್ರವು ಅತ್ಯಂತ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಬAಗಾರಪೇಟೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಎನ್.ಬೋಡಿರೆಡ್ಡಿ, ಕೋಲಾರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಆನಂದಕುಮಾರ್, ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹೆಚ್.ಆರ್.ಶಂಕರಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.

ಕೋಲಾರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಟಿ.ಜಯರಾಮ್, ನಂಗಲಿ ಶ್ರೀ ವರಸಿದ್ದಿ ವಿನಾಯಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಿ.ನೌಷಾದ್ ಆಲಿ, ಮುಡಿಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀನಿವಾಸರೆಡ್ಡಿ, ಮೈಲಾಂಡಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್.ರಾಮಮೂರ್ತಿ, ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀನಿವಾಸಯ್ಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಅರ್ಥಶಾಸ್ತç ಅಧ್ಯಯನ ಕೇಂದ್ರದ ಗೌರವಾಧ್ಯಕ್ಷ ಪಿ.ಎಸ್.ಮುನಿರತ್ನಂ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ಬಾಲಕೃಷ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪರಶುರಾಮ್ ಎನ್ ಉಂಕಿ, ಪ್ರಭಾರಿ ಪ್ರಾಂಶುಪಾಲೆ ದ್ರಾಕ್ಷಾಯಿಣಿ ಎ, ಅರ್ಥಶಾಸ್ತç ಅಧ್ಯಯನ ಕೇಂದ್ರದ ಕಾರ್ಯದರ್ಶಿ ಆರ್.ವೆಂಕಟೇಶ್ ಇದ್ದರು.

ಚಿತ್ರ ೧೨ ಕೆ.ಎಲ್.ಆರ್. ೦೩ : ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿಷಯಾಧಾರಿತ ಕಾರ್ಯಾಗಾರ ಮತ್ತು ಸಂವಾದ ಹಾಗೂ ದ್ವಿತೀಯ ಪಿಯುಸಿ ಅರ್ಥಶಾಸ್ತç ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ಪಿ.ಯು. ಡಿ.ಡಿ.ಪಿ.ಐ. ರಾಮಚಂದ್ರಪ್ಪ, ಕೋಲಾರ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಇದ್ದರು.