ನ್ಯೂಸ್

ಪಾಲಿಕೆ ಆವರಣದಲ್ಲಿ ಬಾಡೂಟ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಮಂಗಳವಾರ ಚಿಕನ್, ಮಟನ್ ಬಿರಿಯಾನಿ ಹಾಗೂ ಕಬಾಬ್ ಘಮಲು ಪಸರಿಸಿತ್ತು.

ಪಾಲಿಕೆಯ ವಿರೋಧ ಪಕ್ಷದ ನಾಯಕ ದೋರಾಜ್ ಮಣಿಕುಂಟ್ಲ ಅವರು ಬಾಡೂಟ ಏರ್ಪಡಿಸಿದ್ದರ ಪರಿಣಾಮ ಇದು.

ನವೀಕರಿಸಲ್ಪಟ್ಟ ವಿರೋಧ ಪಕ್ಷ ನಾಯಕರ ಕಚೇರಿ ಉದ್ಘಾಟನೆ ಹಿನ್ನೆಲೆಯಲ್ಲಿ ದೋರಾಜ ಅವರು ಬಾಡೂಟಕ್ಕೆ ವ್ಯವಸ್ಥೆ ಮಾಡಿದ್ದರು. ಎರಡೂವರೆ ಟನ್ ಮಟನ್, 50 ಕೆಜಿ ಚಿಕನ್ ಅನ್ನು ಪಾಲಿಕೆ ಆವಣದಲ್ಲಿಯೇ ಬೇಯಿಸಿ ಬಡಿಸಲಾಯಿತು.

ಪಾಲಿಕೆಯ ಕಾಂಗ್ರೆಸ್ ಸದಸ್ಯರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಬಾಡೂಟ ಸವಿದರು.