ಕೆ.ಆರ್.ನಗರ: ಹೆಣ್ಣು ಮಕ್ಕಳು ಕಡ್ಡಾಯವಾಗಿ ಶಿಕ್ಷಣವನ್ನು ಕಲಿಯಬೇಕು. ಯಾವುದೇ ಕಾರಣಕ್ಕೂ ಪಾಲಕರ ಒತ್ತಡಕ್ಕೆ ಮಣಿದು ಬಾಲ್ಯವಿವಾಹ ಆಗಬಾರದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆರ್.ಪವಿತ್ರಾ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ಆರೋಗ್ಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮಾನಸಿಕ ಆರೋಗ್ಯ ದಿನ ಮತ್ತು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹಾಗೂ ಕಾನೂನು ಹರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನಸಿಕ ಕಿನ್ನತೆಗೆ ಒಳಗಾಗಬೇಡಿ. ನಿಮ್ಮ ಸಮಾನ್ಯ ಜ್ಞಾನ ಹೆಚ್ಚಿಸುವಂತ ಓದಿನ ಕಡೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
ಬಾಲ್ಯದ ದಿನ ಸಮಯವನ್ನು ವ್ಯಯ ಮಾಡದೆ ವಿದ್ಯೆಯ ಜತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸನ್ನು ಬೇರೆ ಕಡೆ ಗಮನ ಕೊಟ್ಟಾಗ ಮಾನಸಿಕವಾಗಿ ಸದೃಢರಾಗಿ ವಿದ್ಯಾವಂತರಾಗಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮಾನಸಿಕ ತಜ್ಞ ಡಾ.ಕಿಶೋರ್, ಉಪಪ್ರಾಶುಪಾಲ ಮೋಹನ್, ವಕೀಲರಾದ ತಿಮ್ಮೇಗೌಡ. ಕೆ.ವಿ.ಮಹೇಶ್, ನೂತನ್‌ಕುಮಾರ್ ಮಾತನಾಡಿದರು.
ಬಿಇಒ ಗಾಯತ್ರಿ, ಬಿಆರ್‌ಸಿ ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಶಿಕ್ಷಕರಾದ ಎಚ್.ಟಿ.ಮಂಜುನಾಥ್, ಸುಬ್ಬಶೆಟ್ಟಿ, ಚಂದ್ರಕಾಂತ್, ಸೋಮಶೇಖರ್, ನಿರ್ಮಲಾ, ಶಂಕರೇಗೌಡ, ನೀಲಮ್ಮ, ಚಲುವರಾಯಿ, ವಿದ್ಯಾವತಿ, ಪನ್ನಂಗ, ಭಾರತಿ, ಸುಧೀರ್, ವೇದಾವತಿ, ಹೇಮಂತ್, ಸೌಭಾಗ್ಯ ಇನ್ನಿತರರು ಇದ್ದರು.