ಮೂಡಿಗೆರೆ ಬಿಜೆಪಿಯಿಂದ ನಡೆದ ಮಹಿಳಾ ದಿನಾಚರಣೆಯಲ್ಲಿ ಜಯಮ್ಮ ರಾಮೇಗೌಡ, ಸುಮಾ ಬಿಳಗುಳ ಅವರನ್ನು ಸನ್ಮಾನಿಸಲಾಯಿತು. ದೀಪಕ್ ದೊಡ್ಡಯ್ಯ, ಸರೋಜಾ ಸುರೇಂದ್ರ, ಜೆಸಿಂತಾ ಅನಿಲ್ ಕುಮಾರ್, ಕಮಲಮ್ಮ, ಕಾಮಾಕ್ಷಿ, ವೀಣಾ ಶೆಟ್ಟಿ ಇತರರಿದ್ದರು. 
ನ್ಯೂಸ್

ಪಾರದರ್ಶಕ ವ್ಯವಹಾರಕ್ಕೆ ಮಹಿಳೆಯರ ಪಾತ್ರ ಹಿರಿದು

ಮೂಡಿಗೆರೆ: ಸಮಾಜದಲ್ಲಿ ಗಟ್ಟಿತನದ ಪಾರದರ್ಶಕ ವ್ಯವಹಾರ ನಡೆಯಬೇಕಾದರೆ ಮಹಿಳೆಯರ ಶಕ್ತಿ ಅಗತ್ಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಮಹಿಳೆಯರು ಶೇ.50ರಷ್ಟು ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಯನ್ನು ಕೂಡ ಮಹಿಳೆಯರು ತಂದಿದ್ದಾರೆ. ರಾಷ್ಟ್ರಪತಿ ಸ್ಥಾನವನ್ನು ಕೂಡ ಮಹಿಳೆ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಸೇನೆ, ಪೈಲೆಟ್, ಬಾಹ್ಯಾಕಾಶ ಸೇರಿದಂತೆ ಬಹುತೇಕ ಕ್ಲಿಷ್ಟಕರವಾದ ಪ್ರದೇಶಗಳಲ್ಲಿ ಮಹಿಳೆಯರು ನಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸರೋಜಾ ಸುರೇಂದ್ರ ಮಾತನಾಡಿ, ಹೆಣ್ಣು ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದು ಮುಂದೆ ಬಂದಲ್ಲಿ ಅಂತಹ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಮಹಿಳೆಯರು ಕೂಡ ಪುರುಷರಿಗೆ ಸರಿಸಮಾನವಾಗಿ ಬೆಳೆದು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಜಯಮ್ಮ ರಾಮೇಗೌಡ, ಸುಮಾ ಬಿಳಗುಳ ಅವರನ್ನು ಸನ್ಮಾನಿಸಲಾಯಿತು. ಪಪಂ ಸದಸ್ಯೆ ಕಮಲಮ್ಮ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕಾಮಾಕ್ಷಿ, ವೀಣಾ ಶೆಟ್ಟಿ, ಮಂಜುಳಾ ಮಂಜುನಾಥ್, ಅಶ್ವಿನಿ ಸಂತೋಷ್, ರಂಜಿತಾ, ಚಂದ್ರಾವತಿ ಇತರರಿದ್ದರು.