ನ್ಯೂಸ್

ಪಾದಯಾತ್ರೆ ರದ್ದಾಗಲು ಕಾಂಗ್ರೆಸ್​ ಕಾರಣ

ಶಿರಾ: ತಾಲೂಕು ಗೌಡಗೆರೆ ಹೋಬಳಿಯ ನೀರಾವರಿ ಹಕ್ಕೋತ್ತಾಯ ಸಮಿತಿ ಅ.6ರಂದು ಹಮ್ಮಿಕೊಂಡಿದ್ದ ಬೃಹತ್​ ಪಾದಯಾತ್ರೆ ರದ್ದಾಗಲು ಕಾಂಗ್ರೆಸ್​ ಮುಖಂಡರು ಕಾರಣ ಎಂದು ಸಮಿತಿ ಸ್ಥಳಿಯ ಮುಖಂಡ ಗೋಮಾರದಹಳ್ಳಿ ಮಂಜುನಾಥ್​ ಆರೋಪಿಸಿದ್ದಾರೆ.

ತಾಲೂಕಿನ ತಾವರೆಕೆರೆ ರಥ ಬೀದಿಯ ಗಣೇಶ ಗುಡಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ನೀರಾವರಿ ಹಕ್ಕೋತ್ತಾಯ ಸಮಿತಿಯಡಿ ಪಾತೀತ ಹೋರಾಟ ಎಂದು ಸಂಟನೆ ಶುರು ಮಾಡಿದ ಸ್ಥಳಿಯ ಮುಖಂಡರು ಶಾಸಕರ ಒತ್ತಡಕ್ಕೆ ಮಣಿದು ಪಾದಯಾತ್ರೆ ನಡೆಯದಂತೆ ಮಾಡಿದ್ದಾರೆ. ಇದಕ್ಕೆ ಶಾಸಕ ಟಿ.ಬಿ.ಜಯಚಂದ್ರ ಅವರೇ ಕಾರಣ. ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯ ಮದ್ದೇವಳ್ಳಿ ರಾಮಕೃಷ್ಣಪ್ಪ ಮಾತನಾಡಿ, ನಮ್ಮ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಸರ್ವ ಪಗಳ ಮುಖಂಡರ ಸಹಕಾರ ಪಡೆದು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿರುವುದಾಗಿ ತಿಳಿಸಿದರು.

ಗ್ರಾಪಂ ಸದಸ್ಯ ಶಿವು ಸ್ನೇಹಪ್ರಿಯ, ರೈತ ಮುಖಂಡರಾದ ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ಹುಣಸೇಹಳ್ಳಿ ನಾಗರಾಜ್​, ಕುಂಬಾರಹಳ್ಳಿ ತುಳಸಿರಾಮ್​, ಮೊಸರಕುಂಟೆ ಶ್ರೀನಿವಾಸ್​, ಕೆ.ರಂಗನಹಳ್ಳಿ ಹೇಮಂತ್​, ಭೂತಪ್ಪನಗುಡಿ ಈರಣ್ಣ, ತಾವರೆಕೆರೆ ಗೋವಿಂದರಾಜು, ರಂಗನಹಳ್ಳಿ ಗೋವಿಂದರಾಜು, ದಂಡಿಕೆರೆ ರಾಜು, ಗಜ್ಜೀರಳ್ಳಿ ರಾವೇಂದ್ರ, ಹೊಸೂರು ಪ್ರಕಾಶ್​ ರಮೇಶ್​ ಇತರರಿದ್ದರು.