ನ್ಯೂಸ್

ಪಾಂಡಿಚೇರಿ ನೋಂದಣಿಯ ಐದು ದುಬಾರಿ ಕಾರುಗಳು ವಶ

ಪಾಂಡಿಚೇರಿಯಲ್ಲಿ ನೋಂದಣಿಯಾಗಿ ಮೈಸೂರಿನಲ್ಲಿ ಸಂಚರಿಸುತ್ತಿದ್ದ ಐದು ಐಷರಾಮಿ ಕಾರುಗಳನ್ನು ಮೈಸೂರು ನಗರದ ಆರ್‌ಟಿಒ ವೆಸ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಒಂದೇ ದಿನದಲ್ಲಿ 1.75 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದ್ದಾರೆ.

ನೆರೆ ರಾಜ್ಯ ಪಾಂಡಿಚೇರಿಯಲ್ಲಿ ನೋಂದಣಿಯಾಗಿ ಮೈಸೂರು ನಗರದಲ್ಲಿ ಐದು ವಾಹನಗಳು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಆರ್‌ಟಿಒ ಅಧಿಕಾರಿ ಸಿ.ಎನ್.ರಾಮಚಂದ್ರ ನೇತೃತ್ವದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು, ರೊಲ್ಸ್ ರಾಯ್, ಬೆನ್ಜ್, ಆಡಿ ಕ್ಯೂ 3, ಪೋರ್ಶೆ ಮತ್ತು ಮತ್ತೊಂದು ಬೆನ್ಜ್ ಕಾರ ಅನ್ನು ವಶಪಡಿಸಿಕೊಂಡಿದ್ದರು.

ಈ ಐದು ಕಾರುಗಳು ಪಾಂಡಿಚೇರಿಯಲ್ಲಿ ನೋಂದಣಿಯಾಗಿದ್ದು, 12 ತಿಂಗಳ ಬಳಿಕ ರಾಜ್ಯದಲ್ಲಿ ನೋಂದಣಿ ಮಾಡಿಕೊಳ್ಳದೇ ವಾಹನ ಮಾಲೀಕರು ಚಾಲನೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಐದು ವಾಹನಗಳಿಂದ ಬರೋಬ್ಬರಿ ನಾಲ್ಕು ಕೋಟಿ ರೂ.ವೆರೆಗೆ ತೆರಿಗೆ ರಾಜ್ಯ ಸರ್ಕಾರಕ್ಕೆ ಬರಬೇಕಿದೆ.