ನ್ಯೂಸ್

ಪಹಲ್ಗಾಮ್ ದಾಳಿ ಖಂಡಿಸಿ ಯುವ ಕಾಂಗ್ರೆಸ್‌ನಿAದ ಮೌನ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೋರ ಭಯೋತ್ಪಾದಕ ದಾಳಿಯು ಖಂಡನೀಯವಾಗಿದ್ದು, ಕೂಡಲೇ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸೈಯದ್ ಆಫ್ರೀದ್ ಒತ್ತಾಯಿಸಿದರು.

ನಗರದ ಗಾಂಧಿವನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ, ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಧರ್ಮದ ಹೆಸರಿನಲ್ಲಿ ಕೊಲ್ಲುವ ಹಿಂಸೆಯನ್ನು ಪ್ರಚೋದಿಸುವ ಕೃತ್ಯ ಖಂಡನಾರ್ಹವಾಗಿದೆ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಕೇಂದ್ರ ಬಿಜೆಪಿಯ ಭದ್ರತಾ ವೈಫಲ್ಯ ಕಂಡು ಬರುತ್ತದೆ. ಕೇಂದ್ರವು ಪಕ್ಷ ಮತ್ತು ಧರ್ಮವನ್ನು ಬದಿಗಿಟ್ಟು ಉಗ್ರರನ್ನು ಸದೆಬಡಿಯುವಲ್ಲಿ ಕಾರ್ಯಪ್ರವೃತ್ತರಾಗಿ ರಾಷ್ಟ್ರದ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಗೋರು, ಜಿಲ್ಲಾ ಮುಖಂಡರಾದ ಷಮ್ಸ್, ಅಬುಬಕರ್ ಸಿದ್ದಿಕ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸುಹೈಲ್, ನಗರ ಅಧ್ಯಕ್ಷ ಅರ್ಬಾಜ್, ಸುಹೇಬ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೧ : ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೋರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೇಸ್ ವತಿಯಿಂದ ಮೌನ ಪ್ರತಿಭಟನೆ.