ನ್ಯೂಸ್

ಪಶು ಇಲಾಖೆಯಲ್ಲಿ ೩೩೮ ಹುದ್ದೆಗಳು ಖಾಲಿ / ಖಾಸಗಿ ವೈದ್ಯರಿಗೆ ಹೆಚ್ಚಿದ ಬೇಡಿಕೆ / ಇರುವ ಸಿಬ್ಬಂದಿಯಿAದಲೇ ರೋಗ ನಿಯಂತ್ರಣಕ್ಕೆ ವ್ಯಾಕ್ಸಿನ್ ಕಾರ್ಯ ಮುಗಿಸಿದ ಇಲಾಖೆ / ಮೃತ ರಾಸುಗಳ ಪರಿಹಾರ ಹೆಚ್ಚಳಕ್ಕೆ ಪಶುಪಾಲಕರ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಹೈನುಗಾರಿಕೆಯ ಮೂಲ ಕಸುಬಾಗಿರುವ ಕೋಲಾರ ಜಿಲ್ಲೆಯಲ್ಲಿ ರೈತರ ಜೀವನಾಡಿ ರಾಸುಗಳಾಗಿದ್ದು, ಜಿಲ್ಲೆಯ ಪಶು ಇಲಾಖೆಯಲ್ಲಿ ವೈದ್ಯರು ಮತ್ತು ಸಿದ್ದಬಂದಿ ಸೇರಿ ೩೩೮ ಹುದ್ದೆಗಳು ಖಾಲಿ ಇದ್ದು, ಈಗಿನ ಜಾನುವಾರುಗಳ ಗಣತಿ ಪ್ರಕಾರ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು, ಪಶುಪಾಲಕರು ಖಾಸಗಿ ವೈದ್ಯರನ್ನು ಸಂಪರ್ಕಿಸುವAತಾಗಿದೆ.

ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಸೇರಿದಂತೆ ೬ ತಾಲ್ಲೂಕುಗಳಲ್ಲಿ ೬ ತಾಲ್ಲೂಕು ಕೇಂದ್ರ ಆಸ್ಪತ್ರೆಗಳು, ೨೬ ಹೋಬಳಿ ಕೇಂದ್ರಗಳಲ್ಲಿ ಆಸ್ಪತ್ರೆಗಳು, ೫೯ ಪಶು ಚಿಕಿತ್ಸಾಲಯಗಳು, ೨೨ ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಜಿಲ್ಲೆಯಲ್ಲಿ ಇದ್ದು, ಸರ್ಕಾರ ಸೃಷ್ಟಿಸಿರುವ ೪೯೦ ಹುದ್ದೆಗಳ ಪೈಕಿ ೧೫೨ ಹುದ್ದೆಗಳಲ್ಲಿ ಮಾತ್ರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಇನ್ನು ೩೩೮ ಹುದ್ದೆಗಳು ಖಾಲಿ ಇವೆ.

ಜಿಲ್ಲಾ ಆಸ್ಪತ್ರೆಯ ಉಪ ನಿರ್ದೇಶಕರು ಸೇರಿದಂತೆ ೧೦೦ ವೈದ್ಯರ ಹುದ್ದೆಗೆ ೬೪ ವೈದ್ಯರು ಮಾತ್ರ ಕೆಲಸ ನಿರ್ವಹಿಸುತ್ತಿದ್ದು, ಇನ್ನು ೩೬ ವೈದ್ಯರ ಹುದ್ದೆಗಳು ಖಾಲಿ ಇದೆ.

ಪ್ರಸ್ತುತ ೨೧ನೇ ಜಾನುವಾರುಗಳ ಗಣತಿ ಸರ್ವೇ ಕಾರ್ಯ ನಡೆಯುತ್ತಿದೆ. ೨೦ನೇ ಜಾನುವಾರುಗಳ ಗಣತಿ ಪ್ರಕಾರ ಜಿಲ್ಲೆಯಲ್ಲಿ ೨,೦೯,೬೪೨ ಧನಗಳಿವೆ. ೨೬,೫೨೦ ಎಮ್ಮೆಗಳಿವೆ. ೪,೮೩,೮೯೨ ಕುರಿಗಳು, ೯೩,೭೧೩ ಮೇಕೆಗಳು, ೫,೨೯೨ ಹಂದಿಗಳು, ೮,೬೭,೭೨೯ ಕೋಳಿಗಳಿವೆ. ೨೦ನೇ ಜಾನುವಾರುಗಳ ಗಣತಿ ಪ್ರಕಾರ ಹುದ್ದೆಗಳ ಸಂಖ್ಯೆಯು ಹೆಚ್ಚಾಗಬೇಕಾಗಿದೆ. ಹಳೇ ಕಾಲದಲ್ಲಿ ಸರ್ಕಾರ ಜಿಲ್ಲೆಗೆ ಸೃಷ್ಟಿ ಮಾಡಿರುವ ಸಿಬ್ಬಂದಿ ಮತ್ತು ವೈದ್ಯರ ಹುದ್ದೆಗಳನ್ನು ಈಗಲೂ ಮುಂದುವರೆಸಿಕೊAಡು ಬರುತ್ತಿದ್ದು, ಈಗಿನ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.

ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕೋಲಾರ ಜಿಲ್ಲೆಯ ರೈತರು ಮುಖ್ಯ ಕಸುಬು ಹೈನೋದ್ಯಮ ಆಗಿದೆ. ಇದರ ಜೊತೆಗೆ ಕುರಿ, ಮೇಕೆ ಮತ್ತು ಕೋಳಿ ಸಾಕಾಣಿಕೆಯು ಮುಖ್ಯ ಕಸುಬಾಗಿದೆ.

ರಾಸುಗಳಲ್ಲಿ ಕಾಲುಬಾಯಿ ಜ್ವರ, ಚರ್ಮ ಗಂಟು ರೋಗ, ಕಂದು ರೋಗ ಮುಂತಾದ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕುರಿ ಮತ್ತು ಮೇಕೆಗಳಲ್ಲಿ ಪಿಪಿಆರ್ ವೈರಸ್ ಮತ್ತು ಕರುಳುಬೇನೆ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ವರ್ಷಕ್ಕೆ ೨ ಬಾರಿ ರೋಗಗಳ ನಿಯಂತ್ರಣಕ್ಕೆ ವ್ಯಾಕ್ಸಿನ್ ಹಾಕುವ ಕಾರ್ಯ ಹಮ್ಮಿಕೊಳ್ಳಬೇಕಾಗುತ್ತದೆ. ಆ ಸಂದರ್ಭದಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತದೆ. ಹಾಲು ಒಕ್ಕೂಟದಲ್ಲಿರುವ ವೈದ್ಯರ ಮತ್ತು ಪಶು ಇಲಾಖೆಯಲ್ಲಿರುವ ವೈದ್ಯರು ಮತ್ತು ಸಿಬ್ಬಂದಿ ಜೊತೆಗೂಡಿ ಈಗಾಗಲೇ ಜಿಲ್ಲೆಯಲ್ಲಿ ವ್ಯಾಕ್ಸಿನ್ ಕಾರ್ಯವನ್ನು ಮುಗಿಸಿದ್ದಾರೆ.

ಸರ್ಕಾರದ ಪರಿಹಾರದ ಹಣ ಸಾಲದು :

ರಾಸುಗಳು ಅಕಾಲಿಕವಾಗಿ ಮೃತಪಟ್ಟರೆ ಸರ್ಕಾರ ೧೦ ಸಾವಿರ ರೂ.ಗಳನ್ನು ನೀಡುತ್ತದೆ. ಕುರಿ ಮತ್ತು ಮೇಕೆ ಮೃತಪಟ್ಟರೆ ೫ ಸಾವಿರ ರೂ.ಗಳನ್ನು ನೀಡುತ್ತದೆ. ಚಿಕ್ಕ ಮರಿಗಳು ಮೃತಪಟ್ಟರೆ ೩೫೦೦ ರೂ.ಗಳು ನೀಡಲಾಗುತ್ತಿದೆ. ಆದರೆ ಒಂದು ಸೀಮೆ ಹಸು ೭೫ ಸಾವಿರದಿಂದ ೮೦ ಸಾವಿರ ರೂ.ಗಳ ತನಕ ಬೆಲೆ ಇದ್ದು, ಸರ್ಕಾರ ಮೃತಪಟ್ಟರೆ ನೀಡುವ ೧೦ ಸಾವಿರ ರೂ.ಗಳು ಸಾಲದು. ಕನಿಷ್ಟ ೨೫ ಸಾವಿರದಿಂದ ೫೦ ಸಾವಿರ ರೂ.ಗಳ ತನಕ ನೀಡಬೇಕು ಎಂದು ಪಶುಪಾಲಕರ ಒತ್ತಾಯವಾಗಿದೆ.

೧ ಕೋಟಿ ೧೨ ಲಕ್ಷ ಪರಿಹಾರ :

೨೦೨೪ ಮತ್ತು ೨೫ನೇ ಸಾಲಿನಲ್ಲಿ ಮೃತಪಟ್ಟಿರುವ ಕುರಿಗಳಿಗೆ ಏಪ್ರಿಲ್ ತಿಂಗಳಿನಿAದ ಸೆಪ್ಟೆಂಬರ್ ತಿಂಗಳ ತನಕ ೨೦೨೫ ಕುರಿ ಮತ್ತು ಮೇಕೆಗಳಿಗೆ ೧,೧೨,೧೫,೦೦೦ ರೂ.ಗಳ ಪರಿಹಾರವನ್ನು ಸರ್ಕಾರ ನೀಡಿದೆ.

೨೧೭ ಮೃತಪಟ್ಟ ರಾಸುಗಳಿಗೆ ೨೧,೭೦,೦೦೦ ರೂ.ಗಳನ್ನು ಪರಿಹಾರ ಹಣವಾಗಿ ಸರ್ಕಾರ ನೀಡಿದ್ದು, ಪಶುಪಾಲಕರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಿದೆ.

ಬಾಕ್ಸ್

ಜಿಲ್ಲೆಯಲ್ಲ ೫ ರಿಂದ ೬ ತಿಂಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಈ ವರ್ಷದ ಬೇಸಿಗೆ ಮೇವಿನ ಕೊರತೆ ನೀಗುತ್ತದೆ. ಈಗಾಗಲೇ ಇಲಾಖೆಯಿಂದ ಮೇವು ಬೆಳೆಯಲು ಬೀಜಗಳನ್ನು ನೀಡಲಾಗಿದೆ. ಎಲ್ಲಾ ರೈತರ ಬಳಿಯೂ ಮೇವು ಲಭ್ಯತೆ ಇದೆ. ಜಿಲ್ಲೆಯಲ್ಲಿ ೨೭,೧೫೪ ಸಾಕು ನಾಯಿಗಳಿಗೆ ರೇಬಿಸ್ ರೋಗ ನಿಯಂತ್ರಣಕ್ಕೆ ಚುಚ್ಚು ಮದ್ದನ್ನು ಉಚಿತವಾಗಿ ನೀಡಲಾಗಿದೆ. ಕುರಿ ಮತ್ತು ಮೇಕೆಗೆ ಪಿಪಿಆರ್‌ಎಸ್ ವೈರಸ್ ಹರಡದಂತೆ ೩,೧೪,೯೦೦ ಚುಚ್ಚು ಮದ್ದನ್ನು ನೀಡಲಾಗಿದೆ. ಹಾಗೂ ಕರುಳುಬೇನೆ ಹರಡದಂತೆ ೫,೭೭,೫೦೦ ಚುಚ್ಚು ಮದ್ದನ್ನು ನೀಡಲಾಗಿದೆ ಎಂದು ಪಶು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಕೋಟ್

ಜಿಲ್ಲೆಯಲ್ಲಿ ಕಾಲುಬಾಯಿ ರೋಗ ನಿಯಂತ್ರಣಕ್ಕೆ ವರ್ಷಕ್ಕೆ ೨ ಬಾರಿ ವ್ಯಾಕ್ಸಿನ್ ಮಾಡಲಾಗುವುದು. ೪,೪೦,೧೩೨ ಧನಗಳಿಗೆ ವ್ಯಾಕ್ಸಿನ್ ಮಾಡಲಾಗಿದೆ. ಚರ್ಮಗಂಟು ರೋಗ ನಿಯಂತ್ರಣಕ್ಕೆ ದೊಡ್ಡ ರಾಸುಗಳಿಗೆ ವ್ಯಾಕ್ಸಿನ್ ಕಾರ್ಯ ಮುಗಿದಿದೆ. ಜಿಲ್ಲೆಯಲ್ಲಿ ೧,೪೨,೯೩೭ ಕರುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಕ್ಸಿನ್ ಮಾಡಲಾಗಿದೆ. ಕಂದು ರೋಗ ನಿಯಂತ್ರಣಕ್ಕೆ ೪ ತಿಂಗಳಿನಿAದ ೮ ತಿಂಗಳ ಕರುಗಳಿಗೆ ೮,೧೫೨ ಕರುಗಳಿಗೆ ವ್ಯಾಕ್ಸಿನ್ ಮಾಡಲಾಗಿದೆ. ಇದರಿಂದ ಗರ್ಭಪಾತ ಆಗದಂತೆ ಚುಚ್ಚು ಮದ್ದು ತಡೆಯುತ್ತದೆ. ಸಿಬ್ಬಂದಿ ಕೊರತೆಯ ನಡುವೆಯು ಜಿಲ್ಲೆಯಲ್ಲಿ ಜಾನುವಾರುಗಳಿಗೆ ವೈರಸ್ ಹರಡದಂತೆ ಕಾಲ ಕಾಲಕ್ಕೆ ವ್ಯಾಕ್ಸಿನ್ ಕಾರ್ಯವನ್ನು ಮಾಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಖಾಸಗಿ ವೈದ್ಯರ ಸಂಖ್ಯೆ ಕಡಿಮೆ ಇದೆ. ಪಶು ಇಲಾಖೆಯ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ.

-ಡಾ.ಜಿ.ಎಂ.ರಮೇಶ್, ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ಕೋಲಾರ.

ಕೋಟ್

ರಾಸುಗಳು ಮತ್ತು ಕುರಿ ಮೇಕೆಗಳು ಮೃತಪಟ್ಟಾಗ ಸರ್ಕಾರ ನೀಡುವ ಪರಿಹಾರ ಸಾಲದು. ಅದನ್ನು ಹೆಚ್ಚಿಸಬೇಕು. ಹಾಗೂ ಈಗಿನ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪಶು ವೈದ್ಯರ ನೇಮಕ ಮತ್ತು ಸಿಬ್ಬಂದಿಯನ್ನು ನೇಮಕ ಮಾಡುವ ಕೆಲಸ ಸರ್ಕಾರ ತುರ್ತಾಗಿ ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಏಕೈಕ ಪ್ರಯೋಗಾಲಯ ಮಾತ್ರ ಇದ್ದು, ತಾಲ್ಲೂಕು ಕೇಂದ್ರಗಳಲ್ಲಿ ಪ್ರಯೋಗಾಲಯಗಳನ್ನು ಪ್ರಾರಂಭಿಸಬೇಕು.

-ಪಿ.ಆರ್. ಸೂರ್ಯನಾರಾಯಣ, ರಾಜ್ಯ ಕಾರ್ಯದರ್ಶಿ, ಪ್ರಾಂತ ರೈತ ಸಂಘ.

ಚಿತ್ರ ೦೬ ಕೆ.ಎಲ್.ಆರ್. ೦೧ : ಕೋಲಾರ ಜಿಲ್ಲಾ ಪಶು ಆಸ್ಪತ್ರೆ

ಚಿತ್ರ ೦೬ ಕೆ.ಎಲ್.ಆರ್. ೦೧ಎ : ಡಾ.ಜಿ.ಎಂ.ರಮೇಶ್, ಉಪನಿರ್ದೇಶಕರು, ಪಶುಪಾಲನಾ ಇಲಾಖೆ, ಕೋಲಾರ.

ಚಿತ್ರ ೦೬ ಕೆ.ಎಲ್.ಆರ್. ೦೧ಬಿ : ಪಿ.ಆರ್. ಸೂರ್ಯನಾರಾಯಣ, ರಾಜ್ಯ ಕಾರ್ಯದರ್ಶಿ, ಪ್ರಾಂತ ರೈತ ಸಂಘ.