ಸುಮಾರು 50 ವರ್ಷದ ಅಪರಿಚಿತ ಗಂಡಸು ಅಸ್ವಸ್ಥನಾಗಿ ಬಿದಿದ್ದು, ಆತನನ್ನು ಅಂಬುಲೆನ್ಸ್ ವಾಹನದ ಸಿಬ್ಬಂದಿಯಾದ ಮುನೀರ್ ಎಂಬುವವರು ಕೆ. ಆರ್ ಆಸ್ಪತ್ರೆಯ ಕಾಂತರಾಜ್ ವಾರ್ಡ್ನಲ್ಲಿ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 09 ರಂದು ಮೃತ ಪಟ್ಟಿದ್ದಾರೆ. ಮೃತನ ದೇಹವು ಕೆ.ಆರ್ ಆಸ್ಪತ್ರೆಯ ಶವಗಾರದಲ್ಲಿ ಸಂರಕ್ಷಿಸಿಟ್ಟಿದ್ದು , ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಸುಮಾರು 50 ವರ್ಷ ವಯಸ್ಸಾಗಿದ್ದು, 5.4 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈ ಬಣ್ಣ, ಸಾಧಾರಣ ಮೈ ಕಟ್ಟು, ಚೂಪಾದ ಮೂಗು, ಹೊಂದಿದ್ದು, ಮೃತನ ಮೈ ಮೇಲೆ ಯಾವುದೆ ಬಟ್ಟೆ ಇರುವುದಿಲ್ಲ. ಕಪ್ಪು ಮತ್ತು ಬಿಳಿ ತಲೆಯ ಕೂದಲು, ಮೀಸೆ ಬಿಟ್ಟಿದ್ದು, ಮೃತನ ಎದೆಯ ಎಡಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ, ಹೊಟ್ಟೆಯ ಭಾಗದಲ್ಲಿ ಕಪ್ಪು ಮಚ್ಚೆ ಇದ್ದು, ಎರಡು ಮೊಣಕೈಯಲ್ಲಿ ಹಳೆಗಾಯಗಳಿರುತ್ತದೆ. ಎಡ ಮತ್ತು ಬಲ ಮಂಡಿ ಭಾಗದಲ್ಲಿ ಹಳೆ ಗಾಯದ ಗುರುತುಗಳು ಇರುತ್ತದೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ಕಂಟ್ರೋಲ್ ರೂಂ: 112,0821-2418339, 0821-2452200, ನಜರ್ ಬಾದ್ ಠಾಣೆಯ ದೂ. ಸಂ: 0821-2418308 ನ್ನು ಸಂಪರ್ಕಿಸಬಹುದು ಎಂದು ನಜರ್ ಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.