ನ್ಯೂಸ್

ಪತ್ರಿಕೆಗಳು ಪ್ರತಿಪಕ್ಷಗಳಂತೆ ಕಾರ್ಯನಿರ್ವಹಿಸಲಿ

ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಪತ್ರಿಕೆಗಳು ಪ್ರತಿಪಕ್ಷಗಳಂತೆ ಕಾರ್ಯನಿರ್ವಹಿಸಬೇಕು ಎಂದು ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಹೇಳಿದರು.

ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಪ್ರಯುಕ್ತ ವಾನಸ  ಜರ್ನೋತ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ’ ವಿಷಯ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ವಾತನಾಡಿದರು.

ಶತ ಶತವಾನಗಳಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ಮೀರಿ ಸವಾನತೆ ಹಾಗೂ ಸಾವಾಜಿಕ ನ್ಯಾಂುವನ್ನು ಹೊಂದಲು ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ನೂರಾರು ದಲಿತರನ್ನು ಕಾಣಲು ಸಾಧ್ಯ. ಆದರೂ ಪತ್ರಿಕೋದ್ಯಮದಲ್ಲಿ ಆ ಸಂಖ್ಯೆ ಏಕಿಲ್ಲ? ಎಂಬುದರ ಬಗ್ಗೆ ಚಿಂತಿಸಬೇಕಿದೆ. ಅಮೆರಿಕದಲ್ಲೂ ಇದೇ ರೀತಿ ಕರಿಂುರ ಪ್ರಾತಿನಿಧ್ಯ ವಾಧ್ಯಮ ಕ್ಷೇತ್ರದಲ್ಲಿ ಕಡಿಮೆ ಇತ್ತು. ಅದಕ್ಕಾಗಿ ಎಲ್ಲರೂ ಒಂದಾಗಿ ಇತರರನ್ನು ಪ್ರೋತ್ಸಾಹಿಸಿದರು. ಈ ಕಾರಣದಲ್ಲಿ 2010ರಲ್ಲಿ ಅಲ್ಲಿನ ವಾಧ್ಯಮದಲ್ಲಿ ಶೇ.12ರಷ್ಟು ಕರಿಂುರು ಇದ್ದರು. ಈ ರೀತಿಂು ಬದಲಾವಣೆಗಳು ಆಗಬೇಕು ಅಭಿಪ್ರಾಯಪಟ್ಟರು.

ಮಾಧ್ಯಮ ಸರ್ಕಾರದ ಅಂಕುಡೊಂಕು ತಿದ್ದುವ ಮೂಲಕ ಜನರ ಧ್ವನಿಂಾಗಬೇಕು. ಪ್ರಸ್ತುತ ದಲಿತರ ಮೇಲಿನ ದೌರ್ಜನ್ಯ, ಮಹಿಳೆಂುರ ಮೇಲಿನ ಅತ್ಯಾಚಾರ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ೋಷಿಸಿಕೊಂಡರು. ಆದರೆ ಅಲ್ಲಿ ದಾಳಿ ವಾಡಿದ ಉಗ್ರರು ಏನಾದರು? ಅವರನ್ನು ಸಾಯಿಸಲಾಯಿತೇ? ಎಂಬ ವಿಚಾರಗಳಿಗೆ ಇನ್ನೂ ಉತ್ತರ ದೊರಕಿಲ್ಲ. ಇವುಗಳನ್ನು ಪ್ರಶ್ನಿಸುವ ಪತ್ರಕರ್ತರ ಅಗತ್ಯವಿದೆ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಡಾ.ಎಂ. ಮಮತಾ, ಪ್ರಾಧ್ಯಾಪಕರಾದ ಡಾ.ಸಿ.ಕೆ.ಪುಟ್ಟಸ್ವಾಮಿ, ಡಾ. ಎಂ.ಎಸ್.ಸಪ್ನಾ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್, ಪತ್ರಕರ್ತ ಕೆ.ದೀಪಕ್ ಇದ್ದರು.