ನ್ಯೂಸ್

ಪತ್ನಿಯನ್ನು ಕೊಲೆಗೈದ ಪತಿ / ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ತಾಲ್ಲೂಕು, ಸುಗಟೂರು ಹೋಬಳಿ, ನಾಗನಾಳ ಗ್ರಾಮದ ವಾಸಿಯಾದ ಪರಿಶಿಷ್ಟ ಜಾತಿಯ ಸೋಮಶೇಖರ್ ಬಿನ್ ಲೇಟ್ ಮಾರಪ್ಪ ಎಂಬಾತ ವೇಮಗಲ್ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿ ವಿಜಯಕುಮಾರಿ ರವರನ್ನು ಕೊಲೆ ಮಾಡಿರುವ ಆರೋಪ ಸಾಭೀತಾದ ಹಿನ್ನಲೆಯಲ್ಲಿ ೧ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಕೆ.ದಿವ್ಯ ರವರು ಆರೋಪಿಗೆ ಸೋಮವಾರ ಜೀವಾವಧಿ ಶಿಕ್ಷೆ ಹಾಗೂ ೫೫ ಸಾವಿರ ರೂಪಿಗಳ ದಂಢ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಆರೋಪಿ ವಿರುದ್ಧ ಕೋಲಾರ ತಾಲ್ಲೂಕು ವೇಮಗಲ್ ಪೊಲೀಸ್ ಠಾಣೆಯ ವೃತ್ತ ನೀರಿಕ್ಷಕರಾದ ಎಲ್.ಆಂಜಿನಪ್ಪ ರವರು ಸಿಆರ್ ೨೪/೨೦೨೧ ರಂತೆ ಕಲಂ ೩೦೨, ೨೦೧ ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಎಸ್.ಸಿ. ಸಂಖ್ಯೆ ೧೦೦/೨೦೨೧ ರಂತೆ ಪ್ರಕರಣದ ವಿಚಾರಣೆಯನ್ನು ನಡೆಸಿ, ನ್ಯಾಯಾಲಯವು ಆರೋಪವು ರುಜುವಾತಾದ ಹಿನ್ನಲೆಯಲ್ಲಿ ನಾಗನಾಳ ಸೋಮಶೇಖರ್ ಬಿನ್ ಮಾರಪ್ಪ ರವರಿಗೆ ಕಲಂ ಐಪಿಸಿ ೩೦೨ಯಂತೆ ಜೀವಾವಧಿ ಶಿಕ್ಷೆ ಮತ್ತು ೪೫ ಸಾವಿರ ದಂಢ ಮತ್ತು ಐಪಿಸಿ ೨೦೧ರಂತೆ ೭ವರ್ಷ ಸಜೆ ಮತ್ತು ೧೦ ಸಾವಿರ ದಂಢ ವಿಧಿಸಿದೆ.