ಮೈಸೂರು: ಹೆಬ್ಬಾಳಿನ ಮಹದೇಶ್ವರ ಬಡಾವಣೆ ನಿವಾಸಿ ಹನುಮಂತ ಮಾಡಿದ್ದ ಸಾಲಕ್ಕೆ ಅವರ ಪತ್ನಿ ಮಹದೇವಿ ಅವರನ್ನು ಅಪಹರಿಸಿದ ಆರೋಪದ ಅಡಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ನಿವಾಸಿ ಆಶಾ, ನಿರ್ಮಲಾ, ಆಶಾ ಅವರ ಚಿಕ್ಕಮ್ಮ ಹಾಗೂ ಆಶಾ ರವರ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.
ನನ್ನ ಪತಿ ಮಾಡಿದ್ದಕ್ಕೆ ಸಾಲ ವಸೂಲಿಗೆ ಬಂದ ಆಶಾ ಸೇರಿದಂತೆ ನಾಲ್ವರು ಬಲವಂತವಾಗಿ ನನ್ನನ್ನು ಮೈಸೂರಿನಿಂದ ಬಾಗಲಕೋಟೆಗೆ ಕರೆದುಕೊಂಡು ಹೋಗಿದ್ದು, ಅಕ್ರಮವಾಗಿ ಕೂಡಿ ಹಾಕಿದ್ದರು. 2 ತಿಂಗಳ ಕಾಲ ಕೆಲಸ ಮಾಡಿಸಿಕೊಂಡು ವಾಪಸ್ ಕಳುಹಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದು, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.