ಮೈಸೂರು,ಜೂ.21(ಕರ್ನಾಟಕವಾರ್ತೆ):- ರೇಷನ್ ಕಾರ್ಡ್ ಹೊಂದಿದ ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ (e-Kyc ಆಧಾರ್ ಆಧಾರಿತ ಹೆಬ್ಬೆಟ್ಟಿನ ದೃಢೀಕರಣ) ಮಾಡಿಸುವುದು ಕಡ್ಡಾಯವಾಗಿರುತ್ತದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು- 23,00,380 ಸದಸ್ಯರ ಪೈಕಿ 47,334 ಸದಸ್ಯರು e-Kyc ಮಾಡಿಸಲೂ ಬಾಕಿ ಇರುತ್ತದೆ. ಇ-ಕೆವೈಸಿ ಆಗಿರದ ಸದಸ್ಯರ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿ ಮುಂದೆ ಪ್ರದರ್ಶನ ಮಾಡಿದ್ದು, ಪಡಿತರ ಚೀಟಿಯಲ್ಲಿ e-Kyc ಮಾಡಿಸದ ಸದಸ್ಯರಿಗೆ ಜೂನ್-2025 ನೇ ಮಾಹೆಯಲ್ಲಿ ಜೂನ್ 30 ರವರೆಗೆ ಮತ್ತೊಮ್ಮೆ ಕೊನೆಯ ಅವಕಾಶ ನೀಡಲಾಗಿದೆ.
ಮೈಸೂರು ಜಿಲ್ಲೆಯ ಪಡಿತರ ಚೀಟಿದಾರರ ಪೈಕಿ ಈವರೆಗೆ ಇ-ಕೆವೈಸಿ ಮಾಡಿಸಿರದ ಕುಟುಂಬದ ಸದಸ್ಯರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರ(ಎಸ್.ಸಿ ಮತ್ತು ಎಸ್.ಟಿ ಜಾತಿಯವರಾಗಿದ್ದಲ್ಲಿ ಮಾತ್ರ), ಗ್ಯಾಸ್ ಕನೆಕ್ಷನ್ ಪುಸ್ತಕ, ಆಧಾರ್ ದಾಖಲೆಗಳೊಂದಿಗೆ ತೆರಳಿ ಬಯೋ ದೃಢೀಕರಣ ನೀಡಲು ತಿಳಿಸಿಲಾಗಿದ್ದು, ಈ ಆಧಾರ್ ದೃಢೀಕರಣ (e-Kyc) ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜಿ. ಲಕ್ಷಿö್ಮಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.