ನ್ಯೂಸ್

ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿ

ಚಿತ್ರದುರ್ಗ: ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ಅಗತ್ಯವಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರಸ್ವಾಮೀಜಿ ಹೇಳಿದರು. ನಗರದ ಎಸ್‌ಜೆಎಂ ಪಾಲಿಟೆಕ್ನಿಕ್‌ನಿಂದ,ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ವಿದ್ಯಾರ್ಥಿ,ಸಿಬ್ಬಂದಿಗೆ ಏರ್ಪಡಿಸಿರುವ 2 ದಿನಗಳ‘ಪಾಲಿಫೆಸ್ಟ್ ಉತ್ಸವ-2024’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾ ಡಿದ ಅವರು,ಕಲೆ, ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಿದೆ.ಪಠ್ಯೇತರ ಚಟುವಟಿಕೆ ಗಳು ಘನ ವ್ಯಕ್ತಿತ್ವಕ್ಕೆ ಸಹಕಾರಿ ಎಂದರು.

ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್,ಎಸ್‌ಜೆಎಂ ಫಾರ್ಮಸಿ ಕಾಲೇಜು ಪ್ರಾಚಾರ‌್ಯ ನಾಗರಾಜ್,ದೈಹಿಕ ಶಿಕ್ಷಣ ನಿ ರ್ದೇಶಕ ಕುಮಾರಸ್ವಾಮಿ,ಪಾಲಿಟೆಕ್ನಿಕ್‌ನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪಿ.ಬಿ.ರಾಜೇಶ್,ನಳಿನಾಕ್ಷಿ ,ಎಸ್.ಮೋಹನ್‌ಕುಮಾರ್,ಪಿ. ಎ.ರಘು ಹಾಗೂ ಬೋಧಕರು,ಬೋಧಕೇತರ ಸಿಬ್ಬಂದಿ ಇದ್ದರು. ಪಾಲಿಟೆಕ್ನಿಕ್ ಪ್ರಾಚಾರ‌್ಯ ಎಸ್.ವಿ.ರವಿಶಂಕರ್ ಸ್ವಾಗತಿಸಿದರು.