‘ನೋಡಿದವರು ಏನಂತಾರೆ’ ಸಿನಿಮಾ ಜ.31ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ ಎಂದು ನಾಯಕ ನಟ ನವೀಶ್ ಶಂಕರ್ ತಿಳಿಸಿದರು. ಬಹಳಷ್ಟು ಜನರು ಇತರರು ಅಂದುಕೊಳ್ಳುವ ರೀತಿಯಲ್ಲಿ ಬದುಕಬೇಕೆಂದು ಜೀವನ ಸಾಗಿಸುತ್ತಾರೆ. ಇದೇ ರೀತಿ ಅಭಿಪ್ರಾಯ ಎಲ್ಲರಲ್ಲೂ ಇದ್ದರೂ ಅಂತಹ ವ್ಯಕ್ತಿಗಳ ಜೀವನದ ಒಳಹೊಕ್ಕು ನೋಡಿದಾಗ ಅಷ್ಟೇನೂ ಸರಿಯಾಗಿದೆ ಎನಿಸದು. ಇಂತಹ ವ್ಯಕ್ತಿಯೊಬ್ಬ ತನ್ನನ್ನು ತಾನು ಕಂಡುಕೊಳ್ಳಲು ನಡೆಸುವ ಹೋರಾಟದ ಕಥೆಯುಳ್ಳ ವಿಭಿನ್ನ ಅಭಿರುಚಿಯ ಸಿನಿಮಾ ಇದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಕುಲದೀಪ್ ಕಾರಿಯಪ್ಪ ಸಿನಿಮಾ ನಿರ್ದೇಶಿಸಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿಯಾಗಿ ನಟಿಸಿದ್ದಾರೆ ಎಂದರು. ಗೋಷ್ಠಿಯಲ್ಲಿ ನಿರ್ದೇಶಕ ಕುಲದೀಪ್ ಕಾರಿಯಪ್ಪ, ಅಪೂರ್ವ ಭಾರದ್ವಾಜ್ ಹಾಗೂ ಇನ್ನಿತರರು ಇದ್ದರು.