ನ್ಯೂಸ್

ನೆಕ್ಕಿಲಾಡಿಯಲ್ಲಿ ರಸ್ತೆಗೆ ಮಗುಚಿಬಿದ್ದ ಡೀಸೆಲ್ ಟ್ಯಾಂಕರ್. ಡೀಸೆಲ್ ತುಂಬಿಸಿಕೊಳ್ಳಲು ಸ್ಥಳೀಯರಿಂದ ನೂಕುನುಗ್ಗಲು

ಪೊಲೀಸರಿಂದ ಲಾಠಿಚಾರ್ಜ್ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯ

ಟ್ಯಾಂಕರ್‌ನಿಂದ ಡೀಸೆಲ್ ತುಂಬಿಸಿಕೊಳ್ಳಲು ಸ್ಥಳೀಯರಿಂದ ನೂಕುನುಗ್ಗಲು ಉಂಟಾಗಿದ್ದರಿಂದ

ಮಂಗಳೂರಿನಿಂದ ಕೋಲಾರ ಕ್ಕೆ ಹೋಗುತ್ತಿದ್ದ ಟ್ಯಾಂಕರ್ ಬೊಳ್ಳಾರು ಬಳಿ ಮುಂಭಾಗದ ಗಾಲಿಗಳೆರಡು ಕಳಚಿಕೊಂಡ ಕಾರಣ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ರಸ್ತೆಗೆ ಮಗುಚಿಬಿದ್ದ ಡೀಸೆಲ್ ಟ್ಯಾಂಕರ್

ಪುತ್ತೂರು : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ 34ನೇ ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿ ಡೀಸೆಲ್ ತುಂಬಿದ್ದ ಟ್ಯಾಂಕರೊಂದು ಗಾಲಿ ಕಳಚಿದ ಕಾರಣ ಮಗುಚಿ ಬಿದ್ದ ಘಟನೆ ಶನಿವಾರ ನಡೆದಿದೆ.