ನ್ಯೂಸ್

ನೀರಿನ ರಭಸಕ್ಕೆ ಒಡೆದ ಕಾಲುವೆ

ರಾಯಚೂರು

ನೀರಿನ ರಭಸಕ್ಕೆ ಒಡೆದು ನೀರು ಅಕ್ಕಪಕ್ಕದ ಜಮೀನಿಗೆ ನುಗ್ಗಿ ಬೆಳೆ ಹಾನಿಗೊಳಗಾದ ಘಟನೆ ಜರುಗಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುರುಗುಂಟಾ ಹತ್ತಿರ ಎನ್‌ಆರ್‌ಬಿಸಿ 7 ಎ ಕಾಲುವೆಯಲ್ಲಿ ಘಟನೆ ನಡೆದಿದೆ.

ಮಳೆ ಹಾಗೂ ನೀರಿನ ರಭಸಕ್ಕೆ ಕಾಲುವೆಯ ತಡೆಗೋಡೆ 6 ಮೀಟರ್‌ನಷ್ಟು ಕೊಚ್ಚಿ ಹೋಗಿದೆ.

ಸ್ಥಳಕ್ಕೆ ಆಗಮಿಸದೆ ಕೆಬಿಜೆಎನ್‌ಎಲ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರ ಆರೋಪ.