ಹಾವೇರಿ: ಅ.17ರಂದು ಇಲ್ಲಿನ ಪಿಬಿ ರಸ್ತೆ ಬದಿಯ ಕಾಲುವೆ ನೀರಲ್ಲಿ ಬಿದ್ದು ಮೃತಪಟ್ಟ ಶಿವಾಜಿ ನಗರದ ನಿವೇದನ ಬಸವರಾಜ ಗುಡಗೇರಿ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಯಿ ಭೇಟಿ ನೀಡಿ, ಸಾಂತ್ವನ ಹೇಳಿದರು.
ನಿವೇದನ ತಂದೆ ಕಾರು ಚಾಲಕರಾಗಿದ್ದು ಅವರಿಗೆ ಪ್ರವಾಸೋದ್ಯಮ ಇಲಾಖೆ ಅಥವಾ ಇತರ ಅನುದಾನದಡಿ ಸಬ್ಸಿಡಿ ಯೋಜನೆಯಲ್ಲಿ ಕಾರು ವಿತರಿಸುವಂತೆ ಸ್ಥಳೀಯರು ಮನವಿ ಮಾಡಿದರು. ಅದರು ರಾಜ್ಯ ಸರ್ಕಾರದ ಯೋಜನೆ. ಇವರು ಬಾಡಿಗೆ ಮನೆಯಲ್ಲಿ ಇರುವ ಕಾರಣ ನಗರಸಭೆಯಿಂದ ಆಶ್ರಯ ಯೋಜನೆಯ ಅಡಿಯಲ್ಲಿ ಮನೆ ಕಲ್ಪಿಸಿಕೊಡುತ್ತೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು. ನಿವೇದನ ಕುಟುಂಬದವರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ವಿತರಿಸಿದರು.