ಕುಶಾಲನಗರ: ಸಮೀಪದ ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸಿ.ದುರ್ಗೇಶ್ ಅವರನ್ನು ಶಿಕ್ಷಣ ಇಲಾಖೆ, ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ಶಾಲೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ಶಾಲೆಯ ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಜತೆಗೂಡಿ ನಿವೃತ್ತರಾದ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡುತ್ತಿರುವುದು ಗುರುಗಳಿಗೆ ಸಮಾಜ ನೀಡುತ್ತಿರುವ ಗೌರವವಾಗಿದೆ ಎಂದು ಪ್ರಶಂಸಿದರು.
ಮೈಸೂರಿನ ಜನಪದ ವಿದ್ವಾಂಸ ಡಾ ಪಿ.ಕೆ.ರಾಜಶೇಖರ್, ದಾನಿ ಪ್ರವೀಣ್, ಸಂಸ್ಥೆಯ ಪ್ರಮುಖರಾದ ಬಿ.ಪಿ.ಅಪ್ಪಣ್ಣ, ಎಂ.ಬಿ.ಮೊಣ್ಣಪ್ಪ, ರಘು ಸೋಮಯ್ಯ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ವಿ.ಅರುಣಕುಮಾರ್, ಪ್ರಭಾರ ಮುಖ್ಯ ಶಿಕ್ಷಕಿ ಎನ್.ಪುಷ್ಪಾ, ಮಕ್ಕಳ ಸುರಕ್ಷತಾ ಸಮಿತಿ ಅಧ್ಯಕ್ಷ ಮಂಜುನಾಥ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಹೇಮಂತ್, ಉಪಾಧ್ಯಕ್ಷೆ ಇಂದಿರಾ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಆರ್.ರತ್ನಕುಮಾರ್, ಮುಖ್ಯ ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಬಿ.ಎನ್.ಪುಷ್ಪಾ, ಪಾಲಾಕ್ಷ, ಸೋಮಯ್ಯ, ಎಂ.ವಿ.ಮಂಜೇಶ್, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಎಸ್.ನಾಗರಾಜ್, ರಜನಿ, ಟಿ.ವಿ.ಶೈಲಾ, ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.