ನ್ಯೂಸ್

ನಿವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟಣೆ

ವಿಜಯವಾಣಿ ಸುದ್ದಿಜಾಲ ಕೋಲಾರ
ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ಜಿಲ್ಲಾ ನಿವೃತ್ತ ನೌಕರರ ವೇದಿಕೆಯ ಮುಖಂಡರಿAದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಂಗಳವಾರ ನಿವೃತ್ತ ನೌಕರರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಮಂಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ನಿವೃತ್ತ ನೌಕರ ವೇದಿಕೆ ಸಂಚಾಲಕ ಜಿ ಎಂ ಗೋಪಿ ಕೃಷ್ಣನ್ ಮಾತನಾಡಿ, ಕಳೆದ ೨೦೨೨ ರ ಜುಲೈ ೧ ರಿಂದ ೨೦೨೪ರ ಜುಲೈ ೩೧ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿ.ಸಿ.ಆರ್.ಜಿ.ಕಮ್ಯುಟೇಶನ್ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕೆಂದು ಹಾಗೂ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಏಳನೇ ವೇತನ ಆಯೋಗದ ಶಿಫಾರಸುಗಳನ್ನು ನಿವೃತ್ತ ನೌಕರರಿಗೆ ನೀಡದಿದ್ದರೆ ಡಿ ಗ್ರೂಪ್ ನೌಕರರಿಂದ ಹಿಡಿದು ಐ.ಎ.ಎಸ್ ಅಧಿಕಾರಿಗಳವರಗೆ ಲಕ್ಷಾಂತರ ರೂ ನಷ್ಟ ಉಂಟಾಗುತ್ತದೆ. ನಿವೃತ್ತ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಈಗಾಗಲೇ ಫ್ರೀಡಮ್ ಪಾರ್ಕ್ ಬೆಂಗಳೂರಿನಲ್ಲಿ ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ ನೇತೃತ್ವದಲ್ಲಿ ನಮ್ಮ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಿ ಬೇಡಿಕೆಗಳ ಹಕ್ಕೊತ್ತಾಯದ ಮನವಿ ಸಲ್ಲಿಸಿದ್ದೇವೆ ಹಾಗೂ ಮೈಸೂರಿನಲ್ಲೂ ಮುಖ್ಯ ಮಂತ್ರಿಗಳಿಗೆ ವೇದಿಕೆಯ ನಿಯೋಗದಿಂದ ಮನವಿ ಸಲ್ಲಿಸಲಾಗಿದೆ.

ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಸರ್ಕಾರದ ಗಮನ ಸೆಳೆಯಲು ಧರಣಿ ನಡೆಸಲಾಗುವುದೆಂದು ವಿವರಿಸಿದರು.

ಪ್ರತಿಭಟನೆಯ ಜಿಲ್ಲಾ ನಿವೃತ್ತ ನೌಕರರ ವೇದಿಕೆಯಗೌರವ ಅಧ್ಯಕ್ಷ ಪಲ್ಲವಿ ಮಣಿ, ಜಿಲ್ಲಾ ಸಂಚಾಲಕರಾದ ಕೆ.ಗೋಪಾಲ ರೆಡ್ಡಿ, ಜಿ.ಎನ್.ದೇವರೆಡ್ಡಿ, ಜಿಲ್ಲಾ ಮಹಿಳಾ ಸಂಚಾಲಕಿಯರಾದ ಆರ್.ಶಾರದಮ್ಮ, ಎಂಪಿ ಮಂಜುಳಾ, ಕೋಲಾರ ತಾಲ್ಲೂಕು ಸಂಚಾಲಕ ಎಲ್.ವೆಂಕಟರಮಣಪ್ಪ, ಎನ್.ರಾಮಚಂದ್ರಪ್ಪ, ಬಂಗಾರಪೇಟೆ ತಾಲ್ಲೂಕು ಸಂಚಾಲಕರಾದ ನರಸಿಂಹನ್, ಮೋಹನ್ ಕುಮಾರ್, ಮುಳಬಾಗಿಲು ತಾಲ್ಲೂಕು ಜನಾರ್ಧನ್, ನಾರಾಯಣಸ್ವಾಮಿ, ಕೆ ಜಿ ಎಫ್ ತಾಲೂಕು ಮುನಿರತ್ನಂ, ಅಮರನಾಥ್ ಶೆಟ್ಟಿ, ಶ್ರೀನಿವಾಸಪುರ ಕೃಷ್ಣಪ್ಪ, ಅಂಜಿನಪ್ಪ, ಮಾಲೂರು ಮಾಸ್ತಿ ಕೃಷ್ಣಪ್ಪ, ಎ.ಕೆ.ವೆಂಕಟೇಶಪ್ಪ, ಸೇರಿದಂತೆ ಎಲ್ಲಾ ತಾಲ್ಲೂಕುಗಳ ಪದಾಧಿಕಾರಿಗಳು ಮತ್ತು ನಿವೃತ್ತ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೨ : ನಿವೃತ್ತ ನೌಕರರ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾ ನಿವೃತ್ತ ನೌಕರರ ವೇದಿಕೆಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಪ್ರತಿಭಟಣೆ. ಅಪರ ಜಿಲ್ಲಾಧಿಕಾರಿ ಮಂಗಳ ರವರಿಗೆ ಮನವಿ.